Top Ten Cars Sales in India ಸೇಲ್ಸ್‍ನಲ್ಲಿ ಟಾಪ್ ಕಾರ್ಸ್

Share:

ಫೆರಾರಿಯಂತಹ ಕಂಪನಿಗಳು ದಿನಕ್ಕೆ ಬೆರಳೆಣಿಕೆಯ ಕಾರು ಮಾರಾಟ ಮಾಡುತ್ತವೆ.
ಆದರೆ ಪ್ರಯಾಣಿಕ ಕಾರುಗಳು ಹಾಗಲ್ಲ. ಪ್ರತಿದಿನ ಸಾವಿರ ಸಾವಿರ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ. ದೇಶದ ಕಾರು ಮಾರುಕಟ್ಟೆಯಲ್ಲಿ ಮಾರಾಟದಲ್ಲಿ ಅಗ್ರ ಸ್ಥಾನದಲ್ಲಿರುವ ಕಾರುಗಳ ಮಾಹಿತಿ ಇಲ್ಲಿದೆ.
http://www.vijayanextepaper.com/

1. ಮಾರುತಿ ಆಲ್ಟೊ
ಇದು ದೇಶದ ಬೆಸ್ಟ್ ಸೆಲ್ಲಿಂಗ್ ಕಾರು. ಆಲ್ಟೊ 800, ಕೆ10 ಇತ್ಯಾದಿ ಆವೃತ್ತಿಗಳಲ್ಲಿ ಲಭ್ಯ. 796 ಸಿಸಿಯ 3 ಸಿಲಿಂಡರ್ ಎಂಜಿನ್ ಹೊಂದಿರುವ ಆಲ್ಟೊ 800 ಇತ್ತೀಚೆಗೆ ಆಗಮಿಸಿದೆ. ಬೆಂಗಳೂರಿನ ಕಲ್ಯಾಣಿ ಮೋಟಾರ್ಸ್ ನೀಡಿರುವ ಮಾಹಿತಿ ಪ್ರಕಾರ ಆಲ್ಟೊ 800 ಆನ್‍ರೋಡ್ ದರ ಈ ಮುಂದಿನಂತೆ ಇದೆ. ಎಲ್‍ಎಕ್ಸ್‍ಐ: 3,88,819, ಎಲ್‍ಎಕ್ಸ್: 3,61,504, ಸ್ಟಾಂಡರ್ಡ್: 3,19,619. ಸ್ಟಾಂಡರ್ಡ್ ಮೆಟಾಲಿಕ್: 3,24,085., ಎಲ್‍ಎಕ್ಸ್‍ಐ ಮೆಟಾಲಿಕ್: 3,93,286., ಎಲ್‍ಎಕ್ಸ್‍ಐ ಮೆಟಾಲಿಕ್: 3,65,971.
ಆಲ್ಟೊ ಕೆ10 ಕಾರು 998 ಸಿಸಿಯ ಎಂಜಿನ್ ಹೊಂದಿದೆ. ಇದರ ಆನ್‍ರೋಡ್ ದರ ಇಂತಿದೆ. ಎಲ್‍ಎಕ್ಸ್‍ಐ: 4,14, 903, ವಿಎಕ್ಸ್‍ಐ: 4,30,992, ಎಲ್‍ಎಕ್ಸ್‍ಐ ಮೆಟಾಲಿಕ್: 4,19, 369., ವಿಎಕ್ಸ್‍ಐ ಮೆಟಾಲಿಕ್: 4,35,459.

2. ಮಾರುತಿ ಸ್ವಿಫ್ಟ್
ಸ್ವಿಫ್ಟ್ ಕಾರುಗಳಿಗೂ ದೇಶದಲ್ಲಿ ಅತ್ಯಧಿಕ ಬೇಡಿಕೆಯಿದೆ. ಇದು 1,197 ಸಿಸಿಯ 4 ಸಿಲಿಂಡರ್ ಎಂಜಿನ್ ಹೊಂದಿದೆ. ಸರಾಸರಿ ಮೈಲೇಜ್ 14-17 ಕಿ.ಮೀ. ಇದೆ. ಬೆಂಗಳೂರು ಆನ್‍ರೋಡ್ ದರ ಇಂತಿದೆ. ಎಲ್‍ಎಕ್ಸ್‍ಐ: 5,66,834., ವಿಎಕ್ಸ್‍ಐ: 6,26,234., ಎಲ್‍ಡಿಐ: 7,02,859., ವಿಡಿಐ: 5,66,834., ಝಡ್‍ಡಿಐ: 8,15,157., ಝಡ್‍ಎಕ್ಸ್‍ಐ: 7,29,293.

3. ಮಾರುತಿ ಡಿಜೈರ್
ಮಾರುತಿ ಸುಜುಕಿ ಡಿಜೈರ್ 1197 ಸಿಸಿ ಎಂಜಿನ್ ಹೊಂದಿದೆ. ಕಂಪನಿಯ ಪ್ರಕಾರ ಇದರ ಮೈಲೇಜ್19ರಿಂದ 23 ಕಿ.ಮೀ. ತನಕ ಇದೆ. ಇದು ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ದೊರಕುತ್ತದೆ. ಬೆಂಗಳೂರು ಆನ್‍ರೋಡ್ ದರ ಇಂತಿದೆ. ಎಲ್‍ಎಕ್ಸ್‍ಐ: 6,15,401., ವಿಎಕ್ಸ್‍ಐ: 6,86,794., ಎಲ್‍ಡಿಐ: 7,56,703. ವಿಡಿಐ: 8,28,431., ಝಡ್‍ಡಿಐ: 9,28, 728., ಝಡ್‍ಎಕ್ಸ್‍ಐ: 7,96,214., ಆಟೋಮ್ಯಾಟಿಕ್: 8,37,016., ಎಲ್‍ಡಿಐ ಟೂರ್ ವೈಬಿ: 6,54,170., ಎಲ್‍ಡಿಐ ಟೂರ್: 7,43,226.

4. ಮಾರುತಿ ವ್ಯಾಗನಾರ್
ವ್ಯಾಗನಾರ್ ಕಾರು 998ಸಿಸಿಯ 3 ಸಿಲಿಂಡರ್ ಎಂಜಿನ್ ಹೊಂದಿದೆ. ಮೈಲೇಜ್ 16-18 ಕಿ.ಮೀ. ಆಸುಪಾಸಿನಲ್ಲಿದೆ. ಬೆಂಗಳೂರು ಆನ್‍ರೋಡ್ ದರ. ಎಲ್‍ಎಕ್ಸ್‍ಐ: 4,91,202., ಎಲ್‍ಎಕ್ಸ್: 4,60,752., ವಿಎಕ್ಸ್‍ಐ: 5,21,013., ಎಲ್‍ಎಕ್ಸ್‍ಐ ಮೆಟಾಲಿಕ್: 4,95,667., ವಿಎಕ್ಸ್‍ಐ ಎಬಿಎಸ್: 5,59,069., ವಿಎಕ್ಸ್‍ಐ ಎಬಿಎಸ್ ಮೆಟಾಲಿಕ್: 5,63,534. ಇತ್ತೀಚೆಗೆ ಕಂಪನಿಯು ವ್ಯಾಗನಾರ್ ಸ್ಟಿಂಗ್ರೆ ಆವೃತ್ತಿಯನ್ನು ಪರಿಚಯಿಸಿದೆ. ಅದರ ದರ ಇಂತಿದೆ. ವಿಎಕ್ಸ್‍ಐ ಎಬಿಎಸ್: 5,86,228., ವಿಎಕ್ಸ್‍ಐ ಎಬಿಎಸ್ ಮೆಟಾಲಿಕ್: 5,90,695., ಎಲ್‍ಎಕ್ಸ್ ಪಿ/ಎಸ್: 5.17 ಲಕ್ಷ. ಎಲ್‍ಎಕ್ಸ್ ಪಿ/ಎಸ್ ಮೆಟಾಲಿಕ್: 5,22,451., ವಿಎಕ್ಸ್‍ಐ ಪಿಎಸ್: 5.50 ಲಕ್ಷ., ವಿಎಕ್ಸ್‍ಐ ಪಿ/ಎಸ್ ಮೆಟಾಲಿಕ್: 5,55,425. ಪಿ/ಎಸ್ ಎಂದರೆ ಪವರ್ ಸ್ಟಿಯರಿಂಗ್.

 5. ಹುಂಡೈ ಇಯಾನ್
ಹುಂಡೈ ಪರಿಚಯಿಸಿದ ಸುಂದರ ವಿನ್ಯಾಸದ ಪುಟ್ಟ ಕಾರಿದು. 800 ಸಿಸಿ ಎಂಜಿನ್ ಹೊಂದಿರುವ ಇದು 21 ಕಿ.ಮೀ. ಮೈಲೇಜ್ ನೀಡುತ್ತದೆ. ಕಂಪನಿಯ ಡೀಲರ್ ಟ್ರಿಡೆಂಟ್ ಹುಂಡೈ ಪ್ರಕಾರ ಬೆಂಗಳೂರು ಆನ್‍ರೋಡ್ ದರ ಇಂತಿದೆ. ಇಯಾನ್ ಡಿ-ಲೈಟ್: 3.57ರಿಂದ 3.96 ಲಕ್ಷ. ಇಯಾನ್ ಎರಾ: 4.09 ಲಕ್ಷದಿಂದ 4.13 ಲಕ್ಷ. ಮ್ಯಾಗ್ನಾ: 4.46 ಲಕ್ಷದಿಂದ 4.50 ಲಕ್ಷ. ಸ್ಪೋಟ್ರ್ಸ್: 4.80 ಲಕ್ಷದಿಂದ 4.84 ಲಕ್ಷ. ಎಲ್‍ಪಿಜಿ ಆಯ್ಕೆಯಲ್ಲೂ ಇಯಾನ್ ಲಭ್ಯ.

6. ಮಹೀಂದ್ರ ಬೊಲೆರೊ
ದೇಶದ ಸ್ಪೋಟ್ರ್ಸ್ ಯುಟಿಲಿಟಿ ವಾಹನ ತಜ್ಞ ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯ ಬೊಲೆರೊ ಕಾರು ಈಗಲೂ ಉತ್ತಮ ಬೇಡಿಕೆ ಉಳಿಸಿಕೊಂಡಿದೆ. ಇದು ಏಸಿ ಮತ್ತು ಏಸಿ ರಹಿತ ಆವೃತ್ತಿಗಳಲ್ಲಿ ದೊರಕುತ್ತದೆ. ಮಹೀಂದ್ರ ಡೀಲರ್ ಅನಂತ್‍ಕಾರ್ಸ್ ನೀಡಿದ ಬೆಂಗಳೂರು ಆನ್‍ರೋಡ್ ಮಾಹಿತಿ ಇಂತಿದೆ. ಬೊಲೆರೊ ಎಸ್‍ಎಲ್‍ಇ: 8,26,254., ಎಸ್‍ಎಲ್‍ಎಕ್ಸ್: 8,88,183., ಝಡ್‍ಎಲ್‍ಎಕ್ಸ್: 9,08,012., ಏಸಿ ರಹಿತ ಬೊಲೆರೊ ದರ: 7,39,289.

7. ಹೋಂಡಾ ಅಮೇಝ್
ಇದು 1.2 ಲೀಟರ್ ಪೆಟ್ರೋಲ್, 1.6 ಲೀಟರ್ ಐಡಿಟೆಕ್ ಡೀಸೆಲ್ ಎಂಜಿನ್, 1.5 ಲೀಟರ್ ಐಡಿಟೆಕ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯ. ಕಂಪನಿಯ ಪ್ರಕಾರ ಇದರ ಮೈಲೇಜ್ ಪ್ರತಿಲೀಟರ್‍ಗೆ 18 ಕಿ.ಮೀ. ಬೆಂಗಳೂರು ಡೀಲರ್‍ಷಿಪ್ ದಕ್ಷಿಣ್ ಹೋಂಡಾ ಪ್ರಕಾರ ಅಮೇಝ್ ಬೆಂಗಳೂರು ಆನ್‍ರೋಡ್ ದರ ಇಂತಿದೆ. ಅಮೇಝ್ 1.2 ಇ ಎಂಟಿ ಪೆಟ್ರೋಲ್: 6.33 ಲಕ್ಷದಿಂದ 6.38 ಲಕ್ಷ. 1.2 ಇಎಕ್ಸ್: 6.67 ಲಕ್ಷದಿಂದ 6.72 ಲಕ್ಷ. 1.2 ಎಸ್: 7.14 ಲಕ್ಷ. 1.2 ವಿಎಕ್ಸ್: 8.29 ಲಕ್ಷ. ಇವುಗಳ ಆಟೋಮ್ಯಾಟಿಕ್ ಗಿಯರ್ ಆವೃತ್ತಿಗಳಿಗೆ ಕೆಲವು ಸಾವಿರ ರೂ. ಹೆಚ್ಚಿರುತ್ತದೆ. ಡೀಸೆಲ್ ಆವೃತ್ತಿಗಳ ದರ ಮುಂದಿನಂತೆ ಇವೆ. ಅಮೇಝ್ 1.5 ಇ: 7.70 ಲಕ್ಷ., 1.5 ಇಎಕ್ಸ್: 8.02 ಲಕ್ಷ. 1.5 ಎಸ್: 8.41 ಲಕ್ಷ. 1.5 ವಿಎಕ್ಸ್ ಟಾಪ್ ಎಂಡ್: 9.57 ಲಕ್ಷ ಇದೆ.

8. ಹುಂಡೈ ಐ10
ಇದು ನೆಕ್ಸ್ಟ್ ಜೆನ್ ಐ10 ಮತ್ತು ಗ್ರಾಂಡ್ ಐ10 ಆಯ್ಕೆಗಳಲ್ಲಿ ಲಭ್ಯ. 1.1 ಐಆರ್‍ಡಿಇ2 ಮತ್ತು 1.2 ಕಪ್ಪಾ2 ಎಂಜಿನ್ ಆಯ್ಕೆಗಳಲ್ಲಿ ಐ10 ಕಾರು ದೊರಕುತ್ತದೆ. ಬೆಂಗಳೂರಿನ ಅದ್ವೈತ್ ಹುಂಡೈ ಶೋರೂಂ ನೀಡಿದ ಆನ್‍ರೋಡ್ ದರ ಮಾಹಿತಿ ಈ ರೀತಿ ಇದೆ. ಐ10 ಡಿಲೈಟ್: 4,67,025., ಎರಾ: 5.03 ಲಕ್ಷ., ಮಾಗ್ನಾ: 5.43 ಲಕ್ಷ., ಆಸ್ಟಾ: 7.70 ಲಕ್ಷ. ನೂತನ ಗ್ರಾಂಡ್ ಪೆಟ್ರೋಲ್ ಐ10 ಆನ್‍ರೋಡ್ ದರ ಮುಂದಿನಂತೆ ಇದೆ. ಆಸ್ಟಾ: 6.77 ಲಕ್ಷ., ಎರಾ: 5.29 ಲಕ್ಷ., ಮಾಗ್ನಾ: 5.53 ಲಕ್ಷ., ಸ್ಪೋಟ್ರ್ಸ್: 5.96 ಲಕ್ಷ ಇದೆ. ಡೀಸೆಲ್ ಆವೃತ್ತಿಗಳ ದರ. ಯು2 ಸಿಆರ್‍ಡಿಐ ಎರಾ: 6.44 ಲಕ್ಷ., ಮ್ಯಾಗ್ನಾ: 6.68 ಲಕ್ಷ., ಸ್ಪೋಟ್ರ್ಸ್: 7.16 ಲಕ್ಷ., ಆಸ್ಟಾ: 7.92 ಲಕ್ಷ.

9. ಹುಂಡೈ ಐ20
ಐ-ಜೆನ್ ಐ20 ಕಾರುಗಳು  12 ಆವೃತ್ತಿಗಳಲ್ಲಿ ಲಭ್ಯ. ಕಂಪನಿಯ ಡೀಲರ್ ಬ್ಲೂಹುಂಡೈ ಪ್ರಕಾರ ಐ20 ಆವೃತ್ತಿಗಳ ದರ ಈ ಮುಂದಿನಂತೆ ಇದೆ. ಐ20 ಎರಾ: 5.93 ಲಕ್ಷ., ಮ್ಯಾಗ್ನಾ: 6.28 ಲಕ್ಷ., ಸ್ಪೋಟ್ರ್ಸ್: 7.23 ಲಕ್ಷ., ಆಸ್ಟಾ: 7.88 ಲಕ್ಷ., 1.2 ಲೀ. ಅಸ್ಟಾ: 8.42 ಲಕ್ಷ., ಸ್ಪೋಟ್ರ್ಸ್ ಆಟೋಮ್ಯಾಟಿಕ್: 9.61 ಲಕ್ಷ. ಡೀಸೆಲ್ ಆವೃತ್ತಿಗಳು- ಎರಾ: 7.52 ಲಕ್ಷ., ಮ್ಯಾಗ್ನಾ: 7.81 ಲಕ್ಷ., ಸ್ಪೋಟ್ರ್ಸ್: 8.86 ಲಕ್ಷ., ಆಸ್ಟಾ ಡೀಸೆಲ್: 9.41 ಲಕ್ಷ ಇದೆ.

10. ಫೆÇೀರ್ಡ್ ಎಕೊಸ್ಪೋರ್ಟ್
ಫೆÇೀರ್ಡ್ ಕಂಪನಿಯ ಎಕೊಸ್ಪೋರ್ಟ್ ಕೂಡ ದೇಶದಲ್ಲಿ ಉತ್ತಮವಾಗಿ ಮಾರಾಟವಾಗುತ್ತಿವೆ. ಎಕೊಸ್ಪೋರ್ಟ್ ಪೆಟ್ರೋಲ್ ಆವೃತ್ತಿಯು 1.0 ಲೀ. ಎಕೊಬೂಸ್ಟ್ ಮತ್ತು 1.5 ಲೀ. ಟಿಐವಿಸಿಟಿ ಎಂಜಿನ್ ಆಯ್ಕೆಗಳಲ್ಲಿ ದೊರಕುತ್ತದೆ. 1.5 ಲೀ. ಟಿಡಿಸಿಐ ಡೀಸೆಲ್ ಎಂಜಿನ್ ಆಯ್ಕೆಯಲ್ಲೂ ಎಕೊಸ್ಪೋರ್ಟ್ ಲಭ್ಯ. ಫೆÇೀರ್ಡ್ ಡೀಲರ್ `ಲತಾಂಗಿ ಫೆÇೀರ್ಡ್' ನೀಡಿದ ಬೆಂಗಳೂರು ಆನ್‍ರೋಡ್ ದರ ಮಾಹಿತಿ ಇಂತಿದೆ. ಪೆಟ್ರೋಲ್ ಆವೃತ್ತಿಗಳು- ಎಕೊಸ್ಪೋರ್ಟ್ 1.5 ಆ್ಯಂಬಿಯಂಟ್: 7.35 ಲಕ್ಷ., 1.5 ಟ್ರೆಂಡ್: 8.50., 1.5 ಟೈಟಾನಿಯಂ: 9.86., 1.0 ಲೀ. ಎಕೊಬೂಸ್ಟ್: 10.33 ಲಕ್ಷ. ಡೀಸೆಲ್ ಆವೃತ್ತಿಗಳು- ಆ್ಯಂಬಿಯಂಟ್: 8.84 ಲಕ್ಷ., ಟ್ರೆಂಡ್: 9.90 ಲಕ್ಷ., ಟೈಟಾನಿಯಂ ಟಾಪ್‍ಎಂಡ್: 11.72 ಲಕ್ಷ  ಇದೆ.

- Praveen Chandra Puttur

No comments