ಹೊಸ ಸ್ಕಾರ್ಪಿಯೊ

Share:


ಮಹೀಂದ್ರ ಸ್ಕಾರ್ಪಿಯೊ ಫ್ಯಾಮಿಲಿಗೆ ಹೊಸ ಆವೃತಿಯೊಂದು ಸೇರ್ಪಡೆಯಾಗಿದೆ. ಮೆವಾಕ್ ಡೀಸೆಲ್ ಎಂಜಿನ್ ಜೊತೆ ಬಂದಿರುವ ನೂತನ ಎಸ್‍ಯುವಿ ವಿಶೇಷತೆಗಳೇನು?

ಎಸ್‍ಯುವಿ ಸೆಗ್ಮೆಂಟಿನಲ್ಲಿ ಹತ್ತು ಹಲವು ವರ್ಷಗಳಿಂದ ಸ್ಕಾರ್ಪಿಯೊ ಅನಾಭಿಷಿಕ್ತ ರಾಜ. 2002ರಲ್ಲಿ ರಸ್ತೆಗಿಳಿದಾಗ ಅದಕ್ಕೆ ಪೈಪೆÇೀಟಿ ನೀಡಲು ಇದ್ದದ್ದು ಟಾಟಾ ಸಫಾರಿ ಮಾತ್ರ. 11 ವರ್ಷದ ನಂತರ ರೆನೊ ಡಸ್ಟರ್‍ನಂತಹ ಎಸ್‍ಯುವಿಗಳು ಬಂದರೂ ಸ್ಕಾರ್ಪಿಯೊ ವರ್ಚಸ್ಸಿಗೆ ದಕ್ಕೆಯಾಗಿಲ್ಲ. ನೋಡಲು `ರ್ಜರಿಯಾಗಿರುವ ಈ ಕಾರು ಸ್ಟೇಟಸ್ ಸಿಂಬಲ್ ಸಹ ಹೌದು. ಇದೀಗ ಮಹೀಂದ್ರ ಕಂಪನಿಯು ಸ್ಕಾರ್ಪಿಯೊ 2.2 ಮೆವಾಕ್ ್ಡ44 ವಿಎಲ್‍ಎಕ್ಸ್ ಆವೃತ್ತಿಯನ್ನು ಪರಿಚಯಿಸಿದೆ.


ವಿಶೇಷತೆಗಳು
ಎಕ್ಸ್‍ಟೀರಿಯರ್: ಮೆವಾಕ್(ಞಏZಡಿh) ಆವೃತ್ತಿಯ ಹೊರವಿನ್ಯಾಸವನ್ನು ಅಂದಗಾಣಿಸಲು ಸಾಕಷ್ಟು ಸ್ಟಿಕರ್ ವಿನ್ಯಾಸಗಳನ್ನು ಮಾಡಲಾಗಿದೆ. ತೆಳುವಾದ ಫ್ಲಾಸ್ಟಿಕ್ ಹೊದಿಕೆ ಇನ್ನೊಂದು ಹೊಸ ಫೀಚರ್ ಆಗಿದೆ. ಈ ಕ್ಲಾಡಿಂಗ್ ಹೊದಿಕೆಯು ಕಾರಿಗೆ ಹೆಚ್ಚು ಸ್ನಾಯು ಬಂದಂತೆ ಕಾಣಿಸುತ್ತದೆ. ಇಷ್ಟು ಮಾತ್ರವಲ್ಲದೇ ಸ್ಕಾರ್ಪಿಯೊ 2.2 ಮೆವಾಕ್ ವಿಎಲ್‍ಎಕ್ಸ್ ಕಾರಿನ ಹಿಂದಿನ ಬಂಪರ್‍ಗೆ ನೂತನ ಹುಕ್(ಕೊಂಡಿ) ಅಳವಡಿಸಿ ಕೊಂಚ ಮಾರ್ಪಾಡು ಮಾಡಲಾಗಿದೆ. ನ್ಯೂ ಫಾಗ್ ಲ್ಯಾಂಪ್ ಮತ್ತು ಡಿಕಾಲ್ಟ್, ಇಲ್ಯುಮಿನೇಟ್ ಸ್ಪ್ಯಾಲರ್, ಕಪ್ಪು ಬಣ್ಣದ ರೂಫ್ ರೈಲ್ಸ್  ಮತ್ತು 10 ಸ್ಪೋಕ್ ಇರುವ 16 ಇಂಚಿನ ಅಲಾಯ್ ವೀಲ್ ನೂತನ ಕಾರಿನ ಹೊರವಿನ್ಯಾಸವನ್ನು ಅಮೋಘವಾಗಿಸಿದೆ.
ಇಂಟಿರಿಯರ್: ಕಾರಿನೊಳಗೆ ಪ್ರವೇಶಿಸುವಾಗ ಬಿಯೆಜ್ ಇಂಟಿರಿಯರ್ ಬಣ್ಣದ ವಿನ್ಯಾಸ ನಿಮ್ಮನ್ನು ಸ್ವಾಗತಿಸುತ್ತದೆ. ಸೆಂಟ್ರಲ್ ಕನ್ಸೋಲ್ ಮತ್ತು ರಿಯರ್ ಏರ್ ವೆಂಟ್ ಸುತ್ತಮುತ್ತ ಫಾಕ್ಸ್ ಮರದಿಂದ ಫಿನಿಷಿಂಗ್ ಮಾಡಲಾಗಿದೆ. ಚರ್ಮದ ಹೊದಿಕೆಯಿರುವ ಸ್ಟಿಯರಿಂಗ್ ವೀಲ್, ನೀಟಾಗಿರುವ ಏರ್‍ಕಂಡಿಷನ್ ವೆಂಟ್‍ಗಳು ಕಾರಿನ ಅಂದ ಹೆಚ್ಚಿಸಿವೆ. ಟೆಕ್ನಾಲಜಿ: ಮೆವಾಕ್ ಎಂಜಿನ್, 2 ಡಿನ್ ಇರುವ ಬ್ಲೂಟೂಥ್, ಬ್ಲೂವಿಷನ್ ಹೆಡ್‍ಲ್ಯಾಂಪ್, ಮೈಕ್ರೊ ಹೈಬ್ರಿಡ್ ತಂತ್ರಜ್ಞಾನ, ಪವರ್ ಒಆರ್‍ವಿಎಂ, ಮುಂ`Áಗದಲ್ಲಿ ರೈನ್ ಸೆನ್ಸಾರ್ ವೈಪರ್, ವಾಯ್ಸ್ ಅಸಿಸ್ಟ್ ಸಿಸ್ಟಮ್, ಆಡಿಯೋ ಕಂಟ್ರೋಲ್ಸ್, ಹಿಂ`Áಗದಲ್ಲಿ ಏಸಿ ವೆಂಟ್‍ಗಳು, ರಿಯರ್ ಪಾರ್ಕಿಂಗ್ ಸೆನ್ಸಾರ್‍ಗಳು, ರಿಯರ್ ಡಿಫಾಗರ್ ಮತ್ತು ವಾಷ್ ವೈಪ್, ರಿಮೊಟ್ ಸೆಂಟ್ರಲ್ ಲಾಕಿಂಗ್ ಮತ್ತು ಟೈರ್ ಟ್ರೊನಿಕ್ಸ್ ಸಿಸ್ಟಮ್ ಇವೆ. ಪ್ರತ್ಯೇಕ ಪ್ರತ್ಯೇಕವಾಗಿ ನಾಲ್ಕೂ ಟೈರ್‍ಗಳ ಒತ್ತಡದ ಮಾಹಿತಿಯನ್ನು ಚಾಲಕನಿಗೆ ಟೈರ್ ಟ್ರೋನಿಕ್ಸ್ ಸಿಸ್ಟಮ್ ನೀಡುತ್ತದೆ. ಇದರಲ್ಲಿರುವ ವಾಯ್ಸ್ ಗೈಡೆನ್ಸ್ ಸಿಸ್ಟಮ್ ಡೋರ್ ತೆರೆದಿದ್ದರೆ, ಸೀಟ್ ಬೆಲ್ಟ್ `ರಿಸದೆ ಇದ್ದರೆ ನಿಮಗೆ `್ವನಿ ಮೂಲಕ ಮಾಹಿತಿ ನೀಡುತ್ತದೆ.
ಸುರಕ್ಷತೆ ಫೀಚರ್: ಮುಂ`Áಗದಲ್ಲಿ ಎರಡು ಏರ್‍ಬ್ಯಾಗ್‍ಗಳು, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್, ಬಾಗಿಕೊಳ್ಳುವ ಸ್ಟಿಯರಿಂಗ್ ವೀಲ್ ಮುಂತಾದ ಆ್ಯಕ್ಟಿವ್ ಸುರಕ್ಷತೆಯ ಫೀಚರುಗಳಿವೆ. ಸೈಡ್ ಇಂಪ್ಯಾಕ್ಟ್ ಬೀಮ್ಸ್ ಮತ್ತು ಕ್ರಂಬಲ್ ಝೋನ್ ಇತ್ಯಾದಿ ಫ್ಯಾಸಿವ್ ಸುರಕ್ಷತೆಯ ಫೀಚರುಗಳೂ ಇವೆ.

ಆರಾಮದಾಯಕತೆ
ಏಳು ಸೀಟಿನ ಎಸ್‍ಯುವಿಯಲ್ಲಿ ಎರಡು ಸಾಲುಗಳು ಮುಂ`Áಗದ ಸೀಟುಗಳಿಗೆ ಮೀಸಲು.  ಎರಡನೇ ಸಾಲಿನ ಸೀಟಿನಿಂದ ಮೂರನೇ ಸಾಲಿನ ಜಂಪ್ ಸೀಟಿಗೆ ಪ್ರವೇಶಿಸಬೇಕಾಗುತ್ತದೆ. ಅಂದರೆ ಕೈಯಿಡುವ ಆರ್ಮ್ ರೆಸ್ಟ್ ಮಡುಚಿ ಹಿಂದಕ್ಕೆ ಪ್ರವೇಶಿಸಬೇಕು. ಲಾಂಗ್ ಡ್ರೈವ್‍ನಲ್ಲಿ ಹಿಂ`Áಗದ ಅನ್‍ಕಂಫರ್ಟ್ ಅನಿಸಬಹುದು. ಸ್ಕಾರ್ಪಿಯೊದ ಹಿಂದಿನ ಲೆಗ್‍ರೂಂ ಸ್ಥಳಾವಕಾಶ ಕಡಿಮೆ ಇರುವುದು ಒಂದು ಪ್ರಮುಖ ಕೊರತೆಯೆನ್ನಬಹುದು.

ಎಂಜಿನ್ ಮತ್ತು ಪವರ್
ನೂತನ ಕಾರು 2.2 ಲೀಟರಿನ ಮೆವಾಕ್ ಕಾಮನ್ ರೈಲ್ ಡೀಸೆಲ್ ಎಂಜಿನ್ ಹೊಂದಿದೆ. ಇದು ಟರ್ಬೊ ಚಾರ್ಜ್ ಮತ್ತು ಇಂಟರ್‍ಕೂಲ್ಡ್ ಎಂಜಿನ್ ಆಗಿದೆ. 2179 ಸಿಸಿಯ 4 ಸಿಲಿಂಡರಿನ ಎಂಜಿನ್ 4 ಸಾವಿರ ಆವರ್ತನಕ್ಕೆ 121 ಪಿಎಸ್ ಪವರ್ ಮತ್ತು 1,800ರಿಂದ 2,800 ಆವರ್ತನಕ್ಕೆ 290 ಟಾರ್ಕ್ ಪವರ್ ನೀಡುತ್ತದೆ.

ಡ್ರೈವಿಂಗ್ ಅನು`ವ
ಈ ಕಾರನ್ನು ಟೆಸ್ಟ್ ರೈಡ್ ಮಾಡಿರುವ ಝೀಗ್‍ವೀಲ್ ಸ್ನೇಹಿತರಾದ ಅಭಿಷೇಕ್ ಚಾಲಿಯಾ ನೀಡಿದ ಮಾಹಿತಿ ಪ್ರಕಾರ ಇದರ ಡ್ರೈವಿಂಗ್ ಅನು`ವ ಮುಂದಿನಂತೆ ಇದೆ. ಪರಿಷ್ಕøತ ಎಂಜಿನ್ ಅತ್ಯುತ್ತಮ ಚಾಲನೆ ಅನು`ವ ನೀಡುತ್ತದೆ. ಯಾವುದೇ ಟರ್ಬೊಲ್ಯಾಗ್ ಕಿರಿಕ್ ಇಲ್ಲ. ಮೂರು ಡಿಜಿಟ್ ವೇಗದಲ್ಲೂ ಆರಾಮವಾಗಿ ಡ್ರೈವ್ ಮಾಡಬಹುದು. ಹೆಚ್ಚಿನ ಎಸ್‍ಯುವಿಗಳಂತೆ ಇದರ 5 ಸ್ಪೀಡಿನ ಗಿಯರ್ ಬಾಕ್ಸ್ ಸ್ಮೂತಾಗಿರದೆ ಕೊಂಚ ತ್ರಾಸ ನೀಡುತ್ತದೆ. 3 ಸಾವಿರ ಆರ್‍ಪಿಎಂಗೆ ತಲುಪಿದಾಗ ಆ್ಯಕ್ಸಿಲರೇಷನ್ ಚುರುಕಾಗಿ ಅನನ್ಯ ಚಾಲನೆಗೆ ಸಹಕರಿಸುತ್ತದೆ. 3,200 ಆರ್‍ಪಿಎಂಗಿಂತ ವೇಗದಲ್ಲಿ ಹೋದಾಗ ಕ್ಯಾಬಿನ್‍ನೊಳಗೆ ಎಂಜಿನ್ ಸದ್ದು ಹೆಚ್ಚಾಗಬಹುದು.
ಪವರ್ ನಿಲ್ಲಿಸಲು ಮುಂ`Áಗದಲ್ಲಿ ಡಬಲ್ ಕ್ಯಾಲಿಬಾರ್ ಡಿಸ್ಕ್ ಬ್ರೇಕ್ ಮತ್ತು ಹಿಂ`Áಗದಲ್ಲಿ ಡ್ರಮ್ಸ್ ಬ್ರೇಕ್ ಇದೆ. ಅಗತ್ಯ ಬಿದ್ದಾಗ ಎಬಿಎಸ್ ಬಳಸಿಕೊಳ್ಳಬಹುದಾಗಿದೆ. 2,510 ತೂಕದ ಹೆವಿ ಎಸ್‍ಯುವಿಯಾಗಿರುವ ಕಾರಣ ಒಮ್ಮೆಗೆ ಅವಸರದಲ್ಲಿ ಬ್ರೇಕ್ ಹಾಕಿದಾಗ ಮುಗ್ಗರಿಸಿದಂತಾಗಬಹುದು.
ನೂತನ ಕಾರಿನ ಗ್ರೌಂಡ್ ಕ್ಲಿಯರೆನ್ಸ್ 180ಎಂಎಂ ಇದೆ. ಗಂಭೀರವಾದ ಆಫ್-ರೋಡಿಂಗ್ ಪ್ರಯಾಣಕ್ಕೆ ಇದು ಸೂಕ್ತ. ಫೆÇೀರ್ ವೀಲ್ ಡ್ರೈವ್ ಆಯ್ಕೆಯಿರುವುದರಿಂದ ಕಠಿಣ ರಸ್ತೆಯಲ್ಲೂ ಪ್ರಯಾಣಿಸಬಹುದು. ವಾಹನ ಸಾಗುತ್ತಿರುವಾಗಲೇ ್ಡ44 ನಿಂದ ್ಡ42ಗೆ  ಬದಲಾಯಿಸುವುದು ಒಳ್ಳೆಯದಲ್ಲ.
5.7 ಸೆಕೆಂಡಿನಲ್ಲಿ 0-60 ಕಿ.ಮೀ. ವೇಗ ಪಡೆದುಕೊಳ್ಳಬಹುದು. ಎಆರ್‍ಎಐ ಪ್ರಮಾಣಿಕೃತ ಮೈಲೇಜ್ 12.05 ಕಿ.ಮೀ. ಈ ಕೆಟಗರಿಯ ಇತರ ವಾಹನಗಳಿಗೆ ಹೋಲಿಸಿದರೆ ಮೈಲೇಜ್ ಪರವಾಗಿಲ್ಲವೆನ್ನುವಂತೆ ಇದೆ. ಹೊಸದಾಗಿ ಎಸ್‍ಯುವಿ ಖರೀದಿಸಲು ಬಯಸುವರು ನೂತನ ಸ್ಕಾರ್ಪಿಯೊ ಟೆಸ್ಟ್ ಡ್ರೈವ್ ಮಾಡಿ ನೋಡಬಹುದು.

- Praveen Chandra Puttur

No comments