![]() |
http://www.vijayanextepaper.com/Details.aspx?id=1221&boxid=173152251 |
ಕಿತ್ತಳೆ ಬಣ್ಣದ ಕೆಟಿಎಂ ಬೈಕ್ ಇಷ್ಟಪಡುವವರು ಬಹುನಿರೀಕ್ಷೆಯಿಂದ ಕಾಯುತ್ತಿದ್ದ `ಡ್ಯೂಕ್ 390' ಬೈಕ್ ದೇಶದ ರಸ್ತೆಗೆ ಆಗಮಿಸಿದೆ. ಈ ಮ`್ಯಮ ಗಾತ್ರದ ಪ್ರೀಮಿಯಂ ಸ್ಪೋಟ್ರ್ಸ್ ಬೈಕ್‍ನಲ್ಲಿ ಏನಿದೆ ವಿಶೇಷ? ಓದಿ ಈ ರಿಪೆÇೀರ್ಟ್ ಕಾರ್ಡ್.
ಆಸ್ಟ್ರೀಯಾದ ಬೃಹತ್ ದ್ವಿಚಕ್ರವಾಹನ ಕಂಪನಿ ಕೆಟಿಎಂನ ಎರಡನೇ ಡ್ಯೂಕ್ ಬೈಕನ್ನು ದೇಶದ ಎರಡನೇ ಬೃಹತ್ ದ್ವಿಚಕ್ರ ವಾಹನ ಕಂಪನಿ ಬಜಾಜ್ ಆಟೋ ಪರಿಚಯಿಸಿದೆ. ಬಜಾಜ್ ಪುಣೆ ಫ್ಯಾಕ್ಟರಿಯಿಂದ ಆಗಮಿಸಿದ ನೂತನ ಬೈಕ್‍ನ ಹೆಸರು `ಕೆಟಿಎಂ ಡ್ಯೂಕ್ 390'. ದೇಶಕ್ಕೆ ಕಂಪನಿ ಪರಿಚಯಿಸಿದ ಮೊದಲ ಮ`್ಯಮ ಗಾತ್ರದ ಈ ಪ್ರೀಮಿಯಂ ಸ್ಪೋಟ್ರ್ಸ್ ಬೈಕ್‍ನ ಎಕ್ಸ್‍ಶೋರೂಂ ದರ 1.80 ಲಕ್ಷ ರೂಪಾಯಿ.
ಕೆಟಿಎಂನಲ್ಲಿ ಬಜಾಜ್ ಶೇಕಡ 47ರಷ್ಟು ಪಾಲು ಹೊಂದಿದೆ. ಬಜಾಜ್-ಕೆಟಿಎಂ ಜಂಟಿ ಉದ್ಯಮದಲ್ಲಿ ಬಜಾಜ್ ಆಟೋ ಪಾಲು ಶೇಕಡ 47ರಷ್ಟಿದೆ. ದೇಶದಲ್ಲಿರುವ 71 ಬಜಾಜ್ ಪೆÇ್ರಬೈಕಿಂಗ್ ಔಟ್ಲೆಟ್‍ಗಳಲ್ಲಿ ನೂತನ ಬೈಕನ್ನು ಖರೀದಿಸಬಹುದು. ಈ ವರ್ಷ ಸುಮಾರು 12 ಸಾವಿರದಷ್ಟು ಡ್ಯೂಕ್ 390 ಬೈಕನ್ನು ಮಾರಾಟ ಮಾಡುವ ಆಶಯವನ್ನು ಕಂಪನಿ ವ್ಯಕ್ತಪಡಿಸಿದೆ.
ಹೇಗಿದೆ ಬೈಕ್?
ಇದು ಮೊದಲ ನೋಟಕ್ಕೆ ಕಣ್ಮನ ಸೆಳೆಯುವ ಸ್ಟೈಲಿಶ್ ಬೈಕ್. ಸೌಂದರ್ಯದ ದೃಷ್ಟಿಯಿಂದ ಹೇಳುವುದಾದರೆ ಕಳೆದ ವರ್ಷ ಕಂಪನಿ ಪರಿಚಯಿಸಿದ ಡ್ಯೂಕ್ 200 ಬೈಕಿಗೂ ನೂತನ ಡ್ಯೂಕ್ 390 ಬೈಕಿಗೂ ಅಂತಹ ಮಹತ್ವದ ವ್ಯತ್ಯಾಸವೇನೂ ಗೋಚರಿಸುವುದಿಲ್ಲ. ಛಾಸಿ ಮತ್ತು ಬಿಡಿ`Áಗಗಳೂ ಕೊಂಚ ಮಟ್ಟಿಗೆ ಒಂದೇ ರೀತಿ ಇವೆ. ಟ್ಯಾಂಕ್, ಫ್ರೇಮ್ ಮತ್ತು ವೀಲ್‍ಗಳಿಗೆ ನೀಡಲಾಗಿರುವ ಕಿತ್ತಳೆ ಬಣ್ಣ ಮೋಡಿ ಮಾಡುವಂತೆ ಇದೆ. ಜೊತೆಗೆ ಬಿಳಿ ಬಣ್ಣದ ರೇಖೆಗಳೂ ಬೈಕಿನ ಅಂದ ಹೆಚ್ಚಿಸಿವೆ.
ಈ ಬೈಕ್‍ನ ತೂಕ ಕಡಿಮೆ ಮಾಡಿಕೊಳ್ಳಲು ಕಂಪನಿಯು ಕಡಿಮೆ ಪ್ರಮಾಣದಲ್ಲಿ ಬಾಡಿ ಪ್ಯಾನೆಲ್‍ಗಳನ್ನು ಬಳಸಿದೆ. ಗಾಳಿಯನ್ನು ಸರಾಗವಾಗಿ ಸೀಳಿಕೊಂಡು ಆರಾಮವಾಗಿ ಸವಾರಿ ಮಾಡಲು ಸೂಕ್ತವಾಗುವಂತೆ ವಿನ್ಯಾಸ ಮಾಡಲಾಗಿದೆ. ಗ್ರೌಂಡ್ ಕ್ಲೀಯರೆನ್ಸ್ ಸುಮಾರು 170 ಮಿ.ಮೀ. ಇದೆ. ಮುಂ`Áಗದ ಅಲಂಕೃತ ವಿನ್ಯಾಸವು ಬೈಕ್‍ನ ಅಂದ ಹೆಚ್ಚಿಸಿದೆ. 11 ಲೀಟರ್‍ನ ಇಂ`ನ ಟ್ಯಾಂಕ್ ಸಹ ಇದರ ಇನ್ನೊಂದು ವಿಶೇಷತೆ ಎನಿಸುತ್ತದೆ. ಛಾಸಿಗೆ ನೀಡಿರುವ ಕಿತ್ತಳೆ ಬಣ್ಣ ಢಾಳಾಗಿ ಆಕರ್ಷಿಸುತ್ತದೆ. ಆದರೆ ಕಡಿಮೆ ಬಾಡಿ ಪ್ಯಾನೆಲ್ ಬಳಸಿರುವುದರಿಂದ ಇದರ ಗಾಂಭಿರ್ಯತೆ ತಕ್ಕಮಟ್ಟಿಗೆ ಇದೆ.
ಪೆÇ್ರಜೆಕ್ಟರ್ ಹೆಡ್‍ಲ್ಯಾಂಪ್ ಮತ್ತು ಎರಡೂ ಕಡೆಗಳಲ್ಲಿರುವ ಟರ್ನ್ ಇಂಡಿಕೇಟರ್ ಬೈಕಿಗೆ ಬೋಲ್ಡ್ ಲುಕ್ ನೀಡುತ್ತದೆ. ಆರಾಮದಾಯಕ ಸವಾರಿಗೆ ಸೂಕ್ತವಾಗುವಂತೆ ಸೀಟ್ ಜೋಡಣೆ ಮಾಡಲಾಗಿದೆ. ನೆಲದಿಂದ ಸೀಟ್ ಸುಮಾರು 800 ಮಿ.ಮೀ. ಎತ್ತರದಲ್ಲಿದೆ.
ಎಂಜಿನ್ ಮತ್ತು ಕಾರ್ಯಕ್ಷಮತೆ
ಆಸ್ಟ್ರೀಯಾದ ಆಫ್-ರೋಡ್ ದ್ವಿಚಕ್ರವಾಹನ ತಜ್ಞ ಕೆಟಿಎಂನ ಸ್ಟೇಟ್ ಆಫ್ ಆರ್ಟ್ ಕುಶಲತೆಯು ಈ ಬೈಕ್‍ನ ವಿಶೇಷತೆ. ಹೆಚ್ಚು ಟಾರ್ಕ್ ಮತ್ತು ಪವರ್ ಮಾತ್ರವಲ್ಲದೇ ಉತ್ತಮ ಮೈಲೇಜ್ ನೀಡುವಂತಹ ಇಂಜಿನ್ ಇದರಲ್ಲಿದೆ. ಅಂದರೆ 375 ಸಿಸಿಯ ಸಿಂಗಲ್ ಸಿಲಿಂಡರ್, ವಾಟರ್ ಕೂಲ್ಡ್, ನಾಲ್ಕು ಸ್ಟ್ರೋಕ್ ಎಂಜಿನ್ ಇದೆ. ಎಂಜಿನ್ ತೂಕ 36 ಕೆ.ಜಿ. ಇದೆ. ಇದು 9 ಸಾವಿರ ಆವರ್ತನಕ್ಕೆ 43.5 ಪಿಎಸ್ ಪವರ್ ಮತ್ತು 7 ಸಾವಿರ ಆವರ್ತನಕ್ಕೆ 35 ಎನ್‍ಎಂ ಟಾರ್ಕ್ ಪವರ್ ನೀಡುತ್ತದೆ. ಇಂ`ನ ರಹಿತವಾಗಿ ಬೈಕ್ ತೂಕ ಸುಮಾರು 139 ಕೆ.ಜಿ. ಇದೆ. ಉಳಿದ ತೂಕದ ಬೈಕ್‍ಗಳಿಗೆ ಹೋಲಿಸಿದರೆ ಇದರ ಹಗುರ ವಿಶೇಷತೆ ಗಮನ ಸೆಳೆಯುತ್ತದೆ. ಯುಎಸ್‍ಡಿ ಫ್ರಂಟ್ ಫೆÇೀಕ್ರ್ಸ್ ಮತ್ತು ಹಿಂಬದಿಯಲ್ಲಿ ಮೊನೊಶಾಕ್ ಸಸ್ಪೆನ್ಷನ್ ಇದೆ.
17 ಇಂಚಿನ ಅಲಾಯ್ ವೀಲ್, ರಸ್ತೆಯಲ್ಲಿ ಉತ್ತಮ ಹಿಡಿತ ನೀಡುವ ಮೆಟ್‍ಝೆಲೆರ್ ಟೈರ್‍ಗಳಿವೆ. ಸುರಕ್ಷಿತವಾದ ಪ್ರಯಾಣಕ್ಕೆ ಸೂಕ್ತವಾಗುವಂತೆ ಬಾಷ್ ಕಂಪನಿಯ ಆ್ಯಂಟಿ ಲಾಕಿಂಗ್ ಬ್ರೇಕಿಂಗ್ ಸಿಸ್ಟಮ್(ಎಬಿಎಸ್) ಇದೆ. ಮೂರು ಚೇಂಬರ್‍ನ ಸೈಲೆನ್ಸರ್ ಇದೆ. ಎಲೆಕ್ಟ್ರಿಕ್ ಸ್ಟಾರ್ಟರ್, ವೆಟ್ ಮಲ್ಟಿ ಡಿಸ್ಕ್ ಕ್ಲಚ್ ಇದೆ. ಡಿಜಿಟಲ್ ಇಗ್ನಿಷನ್ ಟೈಮಿಂಗ್ ಹೊಂದಾಣಿಕೆ ಫೀಚರ್ ಇರುವ ಪೂರ್ಣ ಪ್ರಮಾಣದ ಎಲೆಕ್ಟ್ರಾನಿಕ್ ಇಗ್ನಿಷನ್ ಸಿಸ್ಟಮ್ ಇದೆ. ಅಂದಹಾಗೆ ಈ ಬೈಕ್‍ನಲ್ಲಿ ಆರು ಸ್ಪೀಡ್ ಗಿಯರ್ ಬಾಕ್ಸ್ ಇದೆ. ಆರನೇ ಗಿಯರ್‍ನಲ್ಲಿ ಹೆಚ್ಚು ರಿಲಾಕ್ಸ್ ಆಗಿ ಡ್ರೈವ್ ಮಾಡಬಹುದು ಎಂದು ಕಂಪನಿ ಹೇಳಿದೆ. ಈ ಬೈಕಲ್ಲಿ ಗಂಟೆಗೆ ಗರಿಷ್ಠ 160 ಕಿ.ಮೀ. ವೇಗದಲ್ಲಿ ಸಾಗಬಹುದು.
ಪುಣೆಯ ಚಕನ್ ಫ್ಯಾಕ್ಟರಿಯಲ್ಲಿ ಉತ್ಪಾದಿಸುವ ನೂತನ ಬೈಕ್ ಹೋಂಡಾ ಸಿಬಿಆರ್250 ಆರ್, ಯಮಹಾ ಆರ್15, ರಾಯಲ್ ಎನ್‍ಫೀಲ್ಡ್ ಬೈಕ್‍ಗಳಿಗೆ ಪೈಪೆÇೀಟಿ ನೀಡುವ ನಿರೀಕ್ಷೆಯಿದೆ.
ಟೇಬಲ್
ಡ್ಯೂಕ್ 200 ಡ್ಯೂಕ್ 390
ವಿನ್ಯಾಸ: ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್, ಸ್ಪಾರ್ಕ್ ಇಗ್ನಿಷನ್ ಇಂಜಿನ್, ಲಿಕ್ವಿಡ್ ಕೂಲ್ಡ್ 1 ಸಿಲಿಂಡರ್, 4 ಸ್ಟ್ರೋಕ್ ಎಂಜಿನ್, ವಾಟರ್ ಕೂಲ್ಡ್
ಡಿಸ್‍ಪ್ಲೇಸ್‍ಮೆಂಟ್: 200 ಸಿಸಿ373.2 ಸಿಸಿ
ಬೋರ್: 72 ಮೀ. ಮೀ.89ಮೀ.ಮೀ.
ಸ್ಟ್ರೋಕ್: 49 ಮಿ.ಮೀ. 60.ಮೀ.ಮೀ.
ಅಶ್ವಶಕ್ತಿ: 25ಎಚ್‍ಪಿ43 ಎಚ್‍ಪಿ
ಸ್ಟಾರ್ಟ್: ಎಲೆಕ್ಟ್ರಿಕ್ ಸ್ಟಾರ್ಟರ್‍ಎಲೆಕ್ಟ್ರಿಕ್ ಸ್ಟಾರ್ಟರ್
ಗಿಯರ್: 6 ಸ್ಪೀಡ್6 ಸ್ಪೀಡ್
ತೂಕ: 129.5 ಕೆ.ಜಿ.139 ಕೆ.ಜಿ.
- Praveen Chandra Puttur
No comments