ಫಿಯೆಟ್ ಪುಂಟೊ ಸ್ಪೋರ್ಟ್ 2013

Share:




ಹಬ್ಬದ ದಿನಗಳು ಹತ್ತಿರ ಬರುತ್ತಿವೆ. ಕೆಲವು ಕಂಪನಿಗಳು ಸಂಪೂರ್ಣ ಹೊಸ ಕಾರನ್ನು ಮಾರುಕಟ್ಟೆಗೆ ಬಿಡುತ್ತಿವೆ. ಆದರೆ ಕೆಲವು ಕಾರು ಕಂಪನಿಗಳು ಈಗಾಗಲೇ ಮಾರುಕಟ್ಟೆಯಲ್ಲಿ ಸಕ್ಸಸ್ ಆಗಿರುವ ಕಾರುಗಳಿಗೆ ಒಂದಿಷ್ಟು ಗ್ರಾಫಿಕ್ಸ್, ಒಂದಿಷ್ಟು ಫೀಚರ್ಸ್ ಅಳವಡಿಸಿ ಮಾರುಕಟ್ಟೆಗೆ ಬಿಡುತ್ತಿವೆ. ಇದೀಗ ಫಿಯೆಟ್ ಗ್ರೂಫ್ ಆಟೋಮೊಬೈಲ್ಸ್ ಲಿಮಿಟೆಡ್ ಕೂಡ 2013ನೇ ಪುಂಟೊ ಆವೃತ್ತಿಯನ್ನು ರಾಜ್ಯಕ್ಕೆ ಪರಿಚಯಿಸಿದೆ.

ಹೊಸ ಪುಂಟೊದಲ್ಲಿ ಏನುಂಟು?

ಬೆಂಗಳೂರಿನ ಕೊರಮಂಗಲ ಸನಿಹದಲ್ಲಿರುವ ಫಿಯೆಟ್ ಕೆಫೆಯಲ್ಲಿ ಕಂಪನಿಯು ಅನಾವರಣ ಮಾಡಿದ ಕಾರಿನ ಹೆಸರು `ಫಿಯೆಟ್ ಪುಂಟೊ ಸ್ಪೋರ್ಟ್ 2013'. ಇದರ ಬೆಂಗಳೂರು ಎಕ್ಸ್‍ಶೋರೂಂ ದರ 7,74,089. ದೆಹಲಿ ಎಕ್ಸ್‍ಶೋರೂಂ ದರ 7,60,048 ಲಕ್ಷ. ಬಿಎಸ್4 ಇಂಗಾಲ ಮಾನದಂಡದ 1.3 ಲೀಟರ್‍ನ ಡೀಸೆಲ್ ಎಂಜಿನ್ ಹೊಂದಿದೆ. ನೂತನ ಕಾರು ಬಿಳಿ ಮತ್ತು ಕೆಂಪು ಬಣ್ಣಗಳಲ್ಲಿ ಲಭ್ಯ. ಕಪ್ಪು ಬಣ್ಣದ ಪೇಂಟ್ ಇರುವ ರೂಫ್, ಕಾಂಟ್ರಾಸ್ಟ್ ಹೊರನೋಟದ ಮಿರರ್‍ಗಳು(ಇವು ಸುಧಾರಿತ ಸೈಡ್ ಮಿರರ್‍ಗಳು). ಸೈಡ್ ಮತ್ತು ಹಿಂಬಂದಿಯಲ್ಲಿ ಸ್ಪೋರ್ಟ್ ಡಿಕಾಲ್ಸ್. ರಿಯರ್ ಸ್ಪ್ಯಾಲರ್, ರೂಫ್ ಸ್ಪ್ಯಾಲರ್, ಕ್ರೋಮ್ ಎಗ್ಸಾಸ್ಟ್ ಪೈಪ್ ಇತ್ಯಾದಿ ಹೊಸ ಬದಲಾವಣೆಗಳನ್ನು ನೂತನ ಕಾರಿನಲ್ಲಿ ಗುರುತಿಸಬಹುದಾಗಿದೆ. 1.3 ಲೀಟರ್‍ನ 93 ಪಿಎಸ್ ಪವರ್‍ನ ಅಡ್ವಾನ್ಸ್‍ಡ್ ಮಲ್ಟಿಜೆಟ್ ಡೀಸೆಲ್ ಎಂಜಿನ್ ಹೊಂದಿದೆ. ಅಂದರೆ ಇದು ನಾಲ್ಕು ಸಾವಿರ ಆವರ್ತನಕ್ಕೆ 93 ಅಶ್ವಶಕ್ತಿ ನೀಡುತ್ತದೆ.
ಉಳಿದಂತೆ ಹಳೆಯ ಪುಂಟೊ ಸ್ಪೋಟ್ರ್ಸ್ ಕಾರಿನಲ್ಲಿದ್ದ ಮುಂಭಾಗದ ಏರ್‍ಬ್ಯಾಗ್, ಬೆಂಕಿ ಅನಾಹುತ ತಡೆಯುವ ವ್ಯವಸ್ಥೆ (ಇಪಿಎಸ್), ರೋಲಿಂಗ್ ಕೋಡ್ ಇರುವ ಇಮೊಬಿಲೈಝರ್, ಆಟೋಮ್ಯಾಟಿಕ್ ಏರ್‍ಕಂಡಿಷನ್, ಎಬಿಎಸ್ ಮತ್ತು ಸ್ಪೀಡ್ ಸೆನ್ಸಿಟಿವ್ ವಾಲ್ಯೂಂ ಹೊಂದಾಣಿಕೆ(ಆಡಿಯೊ ಮತ್ತು ರಿಮೋಟ್ ಕಂಟ್ರೋಲ್‍ಗೆ) ಇತ್ಯಾದಿ ಫೀಚರ್‍ಗಳಿವೆ.

ಪುಂಟೊ ಮೇನಿಯಾ
2013ರ ಪುಂಟೊ ಸ್ಪೋರ್ಟ್ 93 ಎಚ್‍ಪಿ ಮಾತ್ರವಲ್ಲದೇ ಈಗಾಗಲೇ ಇನ್ನಷ್ಟು ಪುಂಟೊ ಕಾರುಗಳು ರಸ್ತೆಯಲ್ಲಿವೆ. ಪುಂಟೊ ಡೈನಾಮಿಕ್: ಇದು 1.2 ಲೀಟರ್‍ನ ಪೆಟ್ರೋಲ್ ಮತ್ತು 1.3 ಲೀಟರ್‍ನ ಮಲ್ಟಿಜೆಟ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದೆ. ಇವೆರಡು ಆವೃತ್ತಿಗಳ ಬೆಂಗಳೂರು ಎಕ್ಸ್ ಶೋರೂಂ ದರ ಕ್ರಮವಾಗಿ 5,37,794 ರೂ. ಮತ್ತು 6,50,815 ರೂ.


ಪುಂಟೊ ಎಮೊಷನ್: 1.4 ಲೀಟರ್ ಫೈರ್ ಪೆಟ್ರೋಲ್ ಮತ್ತು 1.3 ಲೀಟರ್ ಮಲ್ಟಿಜೆಟ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯ. ಬೆಂಗಳೂರು ಎಕ್ಸ್‍ಶೋರೂಂ ದರ ಕ್ರಮವಾಗಿ 6,94,825 ರೂ. ಮತ್ತು 7,13,984 ರೂ. ಆಗಿದೆ.
ಪುಂಟೊ ಆ್ಯಕ್ಟಿವ್: 1.2 ಲೀಟರ್ ಪೆಟ್ರೋಲ್ ಮತ್ತು 1.3 ಲೀಟರ್ ಮಲ್ಟಿಜೆಟ್ ಡೀಸೆಲ್ ಎಂಜಿನ್‍ನಲ್ಲಿ ಲಭ್ಯ. ದರ ಕ್ರಮವಾಗಿ 5,13,586 ರೂ. ಮತ್ತು 5,84,509 ರೂ. ಆಗಿದೆ.
ಪುಂಟೊ 90 ಎಚ್‍ಪಿ: ಇದು 1.3 ಮಲ್ಟಿಜೆಟ್ ಮತ್ತು ಪುಂಟೊ ಸ್ಪೋರ್ಟ್ ಆಯ್ಕೆಯಲ್ಲಿ ಲಭ್ಯ. ದರ ಕ್ರಮವಾಗಿ 7,52,088 ರೂ. ಮತ್ತು 7,74,089 ರೂ. ಅಂದಹಾಗೆ 2013ರ ಪುಂಟೊ ಸ್ಪೋರ್ಟ್ ಈ ಬಳಗಕ್ಕೆ ನೂತನ ಸೇರ್ಪಡೆ.
ಪುಂಟೊ 90 ಬಿಎಚ್‍ಪಿ ಮತ್ತು 93 ಎಚ್‍ಪಿಯ ಪುಂಟೊ ಕಾರುಗಳಲ್ಲಿರುವ 15 ಇಂಚಿನ ಅಲ್ಯುಮಿನಿಯಂ ಅಲಾಯ್ ವೀಲ್ ಕಾರಿನ ಅಂದ ಹೆಚ್ಚಿಸುತ್ತದೆ. ಕಠಿಣ ರಸ್ತೆಯಲ್ಲೂ ನಿರಾಂತಕವಾಗಿ ಚಾಲನೆ ಮಾಡಲು ಸಾಧ್ಯವಾಗುವಂತಹ 195 ಮಿ.ಮೀ.ಗ್ರೌಂಡ್ ಕ್ಲೀಯರೆನ್ಸ್‍ನ್ನು ಪುಂಟೊ ಸ್ಪೋಟ್ರ್ಸ್ ಹೊಂದಿದೆ.

ಪುಂಟೊ ಫೀಚರ್ಸ್
ಈಗಾಗಲೇ ರಸ್ತೆಯಲ್ಲಿರುವ ಪುಂಟೊ ಕಾರುಗಳಲ್ಲಿ ಕೊಟ್ಟ ಹಣಕ್ಕೆ ಮೋಸವಿಲ್ಲದಂತಹ ಫೀಚರ್‍ಗಳಿವೆ. ಹೊಂದಾಣಿಕೆಮಾಡಬಹುದಾದ ಡ್ರೈವರ್ ಸೀಟ್ ಮತ್ತು ಸ್ಟೀಯರಿಂಗ್ ವೀಲ್ ಇದೆ. ಹೆಚ್ಚಿನ ಆವೃತ್ತಿಗಳಲ್ಲಿ ದ್ವಿಬಣ್ಣದ ಇಂಟಿರಿಯರ್ ಇದೆ. ಆರು ಸ್ಪೀಕರ್, ಒಂದು ರಿಮೋಟ್ ಕಂಟ್ರೋಲರ್ ಇರುವ ಮ್ಯೂಸಿಕ್ ವ್ಯವಸ್ಥೆ ಇದ್ದು, ಎಫ್‍ಎಂ, ಸಿಡಿ, ಎಂಪಿ3 ಪ್ಲೈಯರ್‍ನಲ್ಲಿ ನಿಮಗಿಷ್ಟವಾದ ಸಂಗೀತ ಆಲಿಸಬಹುದು. ಉಳಿದಂತೆ ಕೆಲವು ಆವೃತ್ತಿಗಳನ್ನು ಹೊರತುಪಡಿಸಿ ಉಳಿದವುಗಳಲ್ಲಿ ಆರಂಭದಲ್ಲಿ ವಿವರಿಸಿರುವ ಸುರಕ್ಷತೆಯ ಫೀಚರ್‍ಗಳಿವೆ.
ಎಂಜಿನ್: ಫಿಯೆಟ್ ಕಾರುಗಳು ಉತ್ತಮ ತಂತ್ರಜ್ಞಾನದ ಎಂಜಿನ್‍ಗಳಿಗೆ ಫೇಮಸ್. ಪುಂಟೊ ಕಾರುಗಳು ಮಲ್ಟಿಜೆಟ್ ಡೀಸೆಲ್ ಮತ್ತು ಎಫ್‍ಐಆರ್‍ಇ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯ. ಕಂಪನಿ ನೀಡಿದ ಮಾಹಿತಿ ಪ್ರಕಾರ ಡೀಸೆಲ್ ಪುಂಟೊ ಪ್ರತಿಲೀಟರ್‍ಗೆ 20 ಕಿ.ಮೀ. ಮತ್ತು ಪೆಟ್ರೋಲ್ ಆವೃತ್ತಿ 14 ಕಿ.ಮೀ. ಮೈಲೇಜ್ ನೀಡುತ್ತದೆ. ವಿವಿಧ ರಸ್ತೆಯ ಕಂಡಿಷನ್, ಡ್ರೈವಿಂಗ್ ಗುಣಮಟ್ಟ ಇತ್ಯಾದಿ ಫ್ಯಾಕ್ಟರ್‍ಗಳಿಂದ ಮೈಲೇಜ್‍ನಲ್ಲಿ ಏರುಪೇರು ಇರಬಹುದು ಎಂದು ಕಂಪನಿ ಜಾಣತನದ ಉತ್ತರ ನೀಡಿದೆ.
ಸುರಕ್ಷತೆ: ವಿವಿಧ ವಾಹನ ವಿಶ್ಲೇಷಕರು ಹೇಳುವಂತೆ ಫಿಯೆಟ್ ಕಾರುಗಳ ನಿರ್ಮಾಣ ಗುಣಮಟ್ಟ ಉತ್ತಮವಾಗಿರುತ್ತದೆ. ಪುಂಟೊ ಕಾರುಗಳಲ್ಲಿ ಹಲವು ಪ್ರಮುಖ ಸುರಕ್ಷತೆಯ ಫೀಚರ್‍ಗಳಿವೆ. ಹೆಚ್ಚಿನ ಪುಂಟೊ ಕಾರುಗಳಲ್ಲಿ ಡ್ಯೂಯಲ್ ಸ್ಟೇಜ್ ಫ್ರಂಟ್ ಏರ್‍ಬ್ಯಾಗ್‍ಗಳು ಇರುತ್ತವೆ. ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್, ಎಲೆಕ್ಟ್ರಾನಿಕ್ ಬ್ರೇಕ್‍ಫೆÇೀರ್ಸ್ ಡಿಸ್ಟ್ರಿಬ್ಯೂಷನ್, ಎಂಜಿನ್ ಇಮೊಬಿಲೈಝರ್ ಸೇರಿದಂತೆ ಹಲವು ಸುರಕ್ಷತೆಯ ಫೀಚರ್‍ಗಳಿವೆ.
ಒಟ್ಟಾರೆ ಕೊಟ್ಟಹಣಕ್ಕೆ ಮೋಸವಿಲ್ಲದಂತಹ ಆಕರ್ಷಕ ವಿನ್ಯಾಸ, ಅತ್ಯುತ್ತಮ ನಿರ್ಮಾಣ ಗುಣಮಟ್ಟ, ಡೀಸೆಲ್ ಕಾರಿನ ಅತ್ಯುತ್ತಮ ಮೈಲೇಜ್, ಸೂಪರ್ಬ್ ಆದ ಸವಾರಿ ಗುಣಮಟ್ಟ, ಅತ್ಯುತ್ತಮ ಸುರಕ್ಷತೆಯ ಫೀಚರ್‍ಗಳು, ಪವರ್ ಸ್ಟೀಯರಿಂಗ್ ಸೇರಿದಂತೆ ಹತ್ತು ಹಲವು ವಿಷಯಗಳಿಂದ ಸ್ಟೈಲಿಶ್ ಸಣ್ಣಕಾರು ಪುಂಟೊ ಇಷ್ಟವಾಗುತ್ತದೆ.
ಪರಂತೂ, ಪೆಟ್ರೋಲ್ ಪುಂಟೊದ ಕಡಿಮೆ ಮೈಲೇಜ್, ಹಿಂಭಾಗದಲ್ಲಿ ಕಡಿಮೆ ಸ್ಥಳಾವಕಾಶ ಸೇರಿದಂತೆ ಕೆಲವೊಂದು ಇಷ್ಟವಾಗದ ವಿಷಯಗಳೂ ಈ ಕಾರಿನಲ್ಲಿವೆ.

- Praveen Chandra Puttur

No comments