ಪಿಯುಸಿ ಮುಗಿದಾಕ್ಷಣ ಮದುವೆಯಾಗೋಣ್ವ?

Share:
ಮುದ್ದುಗೌರಿ, ಇದು ನಿಮಗೆ ನಾನು ನೀಡುವ ಮೊದಲ ಪ್ರೇಮಪತ್ರ. ಈ ಹಿಂದೆ ಬರೆದಿಟ್ಟ ನೂರಾರು ಪತ್ರಗಳೆಲ್ಲ ಇನ್ನೂ ನನ್ನ ಹತ್ತಿರನೇ ಇದೆ. ಏನೇ ಆಗಲಿ ಈ ಪತ್ರ ನೀಡಲೇಬೇಕೆಂದು ತೀರ್ಮಾನಿಸಿದ್ದೀನಿ. ಪ್ರಪೋಸ್ ಮಾಡದೆ ಹೋದರೆ ಕಳೆದುಕೊಂಡು ಜೀವನ ಪೂರ್ತಿ ಕೊರಗಬೇಕು ಎಂದು ಸ್ನೇಹಿತ ನಾಗ ಎಚ್ಚರಿಸಿದರಿಂದ ಭಂಡ ದೈರ್ಯಮಾಡಿ ಈ ಪತ್ರ ನಿನಗೆ ನೀಡುತ್ತಿದ್ದೇನೆ. ಕೋಪಿಸಿಕೊಳ್ಳದೆ ಓದಿ ದಮ್ಮಯ್ಯ...


ತಪ್ಪುತಿಳಿದುಕೊಳ್ಳಬೇಡಿ. ನನಗೆ ನಿಮ್ಮ ಮೇಲಿರುವುದು ಕ್ರಷ್ ಅಲ್ಲ. ನಿಮಗೆ ಗೊತ್ತಿದೆಯೋ ಇಲ್ವೊ, ನಿಮ್ಮನ್ನು ಪ್ರೀತಿಸಲು ಆರಂಭಿಸಿ ಇಲ್ಲಿಗೆ ಭರ್ತಿ ಎರಡು ವರ್ಷವಾಗಿದೆ. ನೀವಾಗ ಫಸ್ಟ್ ಪಿಯುಸಿಗೆ ಹೋಗುತ್ತಿದ್ದಿರಿ. ನಾನು ಡಿಗ್ರಿ ಕೊನೆ ವರ್ಷದಲ್ಲಿದ್ದೆ. ನಮ್ಮೂರ ಕಾಲುದಾರಿಯಲ್ಲಿ ನಾವಿಬ್ಬರು ಜೊತೆಗೇ ನಡೆಯುತ್ತಿದ್ದೇವು. ಮೌನಗೌರಿ ನೀವು. ತಲೆಬಾಗಿಸಿ ಜಾಣೆ ತರಹ ನಡೆಯುತ್ತಿದ್ದೀರಿ. ನೀವು ಹತ್ತಿರದಲ್ಲಿ ಹಾದು ಹೋಗುವಾಗ ಎದೆ ಢವಢವ. ಕಾಲ್ಗೆಜ್ಜೆ ಸದ್ದು ದೂರವಾದಗ ತಲೆಯೆತ್ತಿ ನೋಡುತ್ತಿದ್ದೆ. ನಿಮ್ಮ ಉದ್ದದ ಜಡೆ ನಂಗಿಷ್ಟ.
ಒಂದು ಪದವಾದರೂ ಮಾತನಾಡಬೇಕೆಂದು ದಿನಾ ಯೋಚಿಸುತ್ತಿದ್ದೆ. ಆದರೆ ಭಯವಾಗುತ್ತಿತ್ತು. ಆದರೆ ಅದೊಂದು ದಿನ ಕಾಲುದಾರಿಯಲ್ಲಿ ನೀನು ಜಾರಿ ಬಿದ್ದಾಗ, ನೋವಾಯ್ತ ಎಂದು ನಾನು ಕೇಳಿದಾಗ "ಇಲ್ಲ" ಎಂದು ತಲೆಯಾಡಿಸಿದ ನಿನ್ನ ಕಣ್ಣಲ್ಲಿ ನೀರಿತ್ತು. ನನ್ನ ಹೃದಯ ಒದ್ದೆಯಾಗಿತ್ತು. ಮುಂದಿನ ದಿನಗಳಲ್ಲಿ ನನಗೊಂದು ಖಾಯಂ ಆಗಿ ನಿನ್ನ ಸ್ಮೈಲ್ ಸಿಗುತ್ತಿತ್ತು. ನೀವು ಬಾರದ ದಿನ ತುಂಬಾ ನೋವಾಗುತ್ತಿತ್ತು. ಪ್ರತಿದಿನ ನಿದ್ದೆಗೆ ಮುನ್ನ ನಿಮ್ಮದೇ ಕನಸು ಕಾಣುತ್ತಿದ್ದೆ. ನನ್ನ ಡಿಗ್ರಿ ಮುಗಿದಾಗ ನೀವು ಸೆಕೆಂಡ್ ಪಿಯುಸಿಗೆ ಎಂಟ್ರಿಯಾಗಿದ್ದೀರಿ. ನನಗೆ ಪೋಸ್ಟಾಫಿಸ್ನಲ್ಲಿ ಕೆಲಸ ಸಿಕ್ಕಿತ್ತು.

ಬಸ್ ಸ್ಟಾಂಡ್ ನಲ್ಲಿ ಅಲ್ಲಿ ಇಲ್ಲಿ ನಿಮ್ಮ ಮುಖ ಕಂಡರೆ ಖುಷಿಯಾಗುತ್ತಿತ್ತು. ಮನೆಯಲ್ಲೀಗ ಅಮ್ಮನಿಗೆ ವಯಸ್ಸಾಗಿದೆ. ನನ್ನ ಮದುವೆಯನ್ನು ನೋಡಬೇಕಂತೆ ಅವರಿಗೆ. ನನಗೆ ನಿಮ್ಮನ್ನು ಬಿಟ್ಟು ಯಾವ ಹುಡುಗಿಯ ಮೇಲೂ ಪ್ರೀತಿ ಬಂದಿಲ್ಲ. ಬರುವುದೂ ಸಾಧ್ಯವಿಲ್ಲ. ನನ್ನ ಪ್ರೀತಿಸ್ತಿರಾ? ಪಿಯುಸಿ ಮುಗಿದ ಕೂಡಲೇ ಮದುವೆಯಾಗಿ ಬಿಡೋಣ್ವ... ನಿಮ್ಮ ಪತ್ರಕ್ಕಾಗಿ ಕಾಯುತ್ತಿರುವೆ.
ಇಂತಿ ನಿನ್ನ ಪ್ರೀತಿಯ- ಪವಿ

 ಇನ್ನೆರಡು ಪತ್ರಗಳು

ನಿನ್ನ ಕೋಪಕ್ಕೀಗ ಮೊದಲ ಅನಿವರ್ಸರಿ..!

ಒಲವಿನ ಮಯೂರಿಗೆ ಮೊದಲ ಪತ್ರ


- Praveen Chandra Puttur

 

No comments