ಲೆಜೆಂಡರಿ ಜೀಪ್

Share:
ಕಾಡುಮೇಡು, ಬೆಟ್ಟಗುಡ್ಡ, ನದಿಕಣಿವೆಗಳ ಹಾದಿಗಳಲ್ಲಿ, ರಸ್ತೆಗಳೇ ಇಲ್ಲದ ದಾರಿಗಳಲ್ಲಿ, ಡಾಮರೇ ಕಾಣದ ಏರಿಯಗಳಲ್ಲಿ, ರಿವರ್ಸ್ ಬೆಂಡ್, ಹೇರ್‍ಪಿನ್ ಹೆದ್ದಾರಿಗಳಲ್ಲಿ ಮಾತ್ರವಲ್ಲದೇ ಸಂಚಾರ ದಟ್ಟಣೆಯ ನಗರ ರಸೆಗಳಲ್ಲೂ ಸವಾರಿ ಮಾಡಬಹುದಾದ ಅಮೆರಿಕದ  ಲೆಜೆಂಡರಿ `ಜೀಪ್' ಬ್ರಾಂಡ್‍ನ ಎಸ್‍ಯುವಿಗಳನ್ನು  ಫಿಯೆಟ್ ಭಾರತಕ್ಕೆ ಪರಿಚಯಿಸಲಿದೆ.
Published Vijayanext


ಎರಡನೇ ಮಹಾಯುದ್ಧದ ಸಮಯದಲ್ಲಿ ಅಮೆರಿಕದ ಸೇನೆಗೆ ತುರ್ತಾಗಿ ಎಲ್ಲಾ ವೀಲ್ ಡ್ರೈವ್ ಸಾಮಥ್ರ್ಯವಿರುವ ಕಾರುಗಳ ಅವಶ್ಯಕತೆ ಬಿತ್ತು.
ಕೇವಲ 49 ದಿನಗಳಲ್ಲಿ ಇಂತಹ ವಾಹನದ ಪೆÇ್ರಟೊಟೈಪ್ ಮಾದರಿ ನಿರ್ಮಿಸಿಕೊಡಲು ಸಾಧ್ಯವೇ? ಎಂದು ಸರಿಸುಮಾರು 135 ವಾಹನ ಕಂಪನಿಗಳನ್ನು ಸೇನೆ ಸಂಪರ್ಕಿಸಿತ್ತು. ಕೇವಲ ಬೆಂಟಮ್ ಮತ್ತು ವಿಲ್ಲಿಸ್ ಓವರ್‍ಲ್ಯಾಂಡ್ ಎಂಬ ಎರಡೇ ಎರಡು ಕಂಪನಿಗಳು ಮಾತ್ರ ಇಂತಹ ವಾಹನ ನಿರ್ಮಾಣಕ್ಕೆ ಮುಂದೆ ಬಂದಿದ್ದವು.  ಆಗ ಬೆಂಟಮ್ ಕಂಪನಿಯು ದಿವಾಳಿಯೆದ್ದು ಹೋಗಿತ್ತು. ಡೆಡ್‍ಲೈನ್ ವಿಸ್ತರಣೆ ಮಾಡಲು ಸೇನೆ ಸಮ್ಮತಿಸಲಿಲ್ಲ.  ಕಂಪನಿಯು ಕಾರ್ಲ್ ಪೆÇ್ರಬಸ್ಟ್ ಎಂಬ ಪ್ರತಿಭಾನ್ವಿತ ವಾಹನ ವಿನ್ಯಾಸಕನನ್ನು ನೇಮಿಸಿಕೊಂಡು ಹೊಸ ವಿಲ್ಲಿಸ್ ಎಂಬಿ ವಿನ್ಯಾಸ ಮಾಡಿತು. ಇದು ಜಗತ್ತಿನ ಪ್ರಪ್ರಥಮ ಆಫ್-ರೋಡ್ ಎಸ್‍ಯುವಿ. ಫಾದರ್ ಆಫ್ ಎಸ್‍ಯುವಿ! ಇದೇ ಮುಂದೆ ಜೀಪ್ ಬ್ರಾಂಡ್‍ನಲ್ಲಿ ಜನಪ್ರಿಯವಾಯಿತು. ರಸ್ತೆಗೆ ಸಾಲು ಸಾಲು ಜೀಪ್ ಬ್ರಾಂಡ್ ವಾಹನಗಳು ಆಗಮಿಸಿದವು.

ಅಮೆರಿಕದ ಐತಿಹಾಸಿಕ ಜೀಪ್ ಬ್ರಾಂಡ್‍ನ ಎಸ್‍ಯುವಿಗಳನ್ನು ನಮ್ಮ ರಸ್ತೆಗೆ ಫಿಯೆಟ್ ಪರಿಚಯಿಸಲಿದೆ. ಆಫ್‍ರೋಡ್ ಎಸ್‍ಯುವಿ ಪೂರೈಸುವಲ್ಲಿ ಜೀಪ್ ಫೇಮಸ್. ನಮ್ಮ ರಸ್ತೆಗೆ ಆಗಮಿಸಲಿರುವ ಕಾರುಗಳು ಆಫ್ -ರೋಡ್ ಮಾತ್ರವಲ್ಲದೇ ನಗರ ರಸ್ತೆಗೂ ಸೂಕ್ತವಾಗಿರುವುದು ವಿಶೇಷ. ಜೀಪ್ ಬ್ರಾಂಡ್ ಪರಿಚಯಿಸಲಿರುವ ಸರಣಿ ಕಾರುಗಳಲ್ಲಿ ದೇಶಕ್ಕೆ ಮೊದಲು ಬರೋದು ಗ್ರಾಂಡ್ ಚೆರೊಕೆ ಎಸ್‍ಯುವಿ.

ಗ್ರಾಂಡ್ ಚೆರೊಕೆ
ಫಿಯೆಟ್ ಬ್ರಾಂಡ್‍ನಡಿ ಜೀಪ್‍ನ ಮೊದಲ ಉತ್ಪನ್ನ ಗ್ರಾಂಡ್ ಚೆರೊಕೆ. ಜಾಗತಿಕವಾಗಿ ಇದು ಡಬ್ಲ್ಯುಕೆ2 ಹೆಸರಲ್ಲಿ ಜನಪ್ರಿಯ. ಅಮೆರಿಕ ರಸ್ತೆಗೆ 2010ರಲ್ಲಿ ಚೆರೊಕೆ ಆಗಮಿಸಿತ್ತು. ಇದು ಆಫ್ ರೋಡಿಗೂ ಆನ್‍ರೋಡಿಗೂ ಸೈ ಎನ್ನುವಂತಹ ಕಾರು. ಹೊರವಿನ್ಯಾಸದಲ್ಲಿ ಇದು ಕ್ಲಾಸಿಕ್ ಜೀಪ್ ಲುಕ್ ಹೊಂದಿದೆ. ಇದರ ಮುಂಭಾಗದ ಗ್ರಿಲ್ ಏಳು ತೂತು(ಸ್ಲಾಟ್)ಹೊಂದಿದೆ. ಈ ಏಳು ಸ್ಲಾಟ್ ವಿಷಯ ಕೋರ್ಟ್ ಮೆಟ್ಟಲೇರಿತ್ತು. ಯಾಕೆಂದರೆ ಜನರಲ್ ಮೋಟರ್ಸ್ ಕಂಪನಿಯ ಹಮ್ಮರ್ ಸಹ ಇಂತಹದ್ದೇ ಏಳು ಸ್ಲಾಟಿನ ಗ್ರಿಲ್ ಬಳಸಿತ್ತು. ವಿಲ್ಲಿಸ್ ಬ್ರಾಂಡ್ ಸಮಯದಲ್ಲಿಯೇ ಇಂತಹ ಸ್ಲಾಟ್ ಬಳಸುತ್ತಿದ್ದೇವೆ ಎಂದು ವಾದಿಸಿ ಕೋರ್ಟ್‍ನಲ್ಲಿ ಜೀಪ್ ಗೆದ್ದಿತ್ತು.

ಹೊರನೋಟಕ್ಕೆ ಗ್ರಾಂಡ್ ಚೆರೊಕೆ ಬೆಟ್ಟ ಗುಡ್ಡದ ರಸ್ತೆಯಲ್ಲಿ ಸಾಗುವ ಆಫ್ ರೋಡ್ ವಾಹನದಂತೆ ಕಾಣುವುದಿಲ್ಲ. ಬದಲಾಗಿ ನಮ್ಮ ರಸ್ತೆಯಲ್ಲಿ ನಿತ್ಯ ಸಂಚಾರಿಸುತ್ತಿರುವ ಉರುಂಟಾದ ಕ್ರಾಸೊವರ್ ಕಾರುಗಳಂತೆ ಕಾಣುತ್ತದೆ. ಈ ವೃತ್ತಾಕಾರದ ವಿನ್ಯಾಸ ಆಫ್ ರೋಡ್ ಸವಾರಿಯಲ್ಲಿ 360 ಡಿಗ್ರಿ ವೀಕ್ಷಣೆಗೆ ನೆರವಾಗುತ್ತದೆ. ಈ ಕಾರಿನಲ್ಲಿರುವ ಏರ್ ಸಸ್ಪೆನ್ಷನ್ ವ್ಯವಸ್ಥೆಯ ಬಗ್ಗೆ ಒಂದೆರಡು ಮಾತು ಹೇಳಲೇಬೇಕು. ಇದರ ಸಸ್ಪೆನ್ಷನ್‍ನನ್ನು ಬೇಕಾದ ರೀತಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದು. ಅಂದರೆ ಮರಳು, ಮಣ್ಣು, ಕಲ್ಲು ಬಂಡೆಗಳ ಹಾದಿಗಳಲ್ಲಿ ಬೇಕಾದ ಎತ್ತರಕ್ಕೆ ಸೆಟ್ ಮಾಡಿಕೊಳ್ಳಬಹುದು.

ಎಲ್ಲಾ ಅದ್ಧೂರಿ  ಎಸ್‍ಯುವಿಗಳಂತೆ ಗ್ರಾಂಡ್ ಚೆರೊಕೆ ಇಂಟಿರಯರ್ ಲೆದರ್ ಮತ್ತು ಮರದ ವಿನ್ಯಾಸ ಹೊಂದಿದೆ. ಆಫ್ ರೋಡ್ ಸವಾರಿಗೆ ಸೂಕ್ತವಾಗುವಂತೆ ಇದರ ಫೀಚರುಗಳಿವೆ. ದೊಡ್ಡ ಗಾತ್ರದ ಕಪ್ ಹೋಲ್ಡರ್‍ಗಳು, ಸೆಂಟ್ರಲ್ ಕನ್ಸೋಲ್‍ನಲ್ಲಿರುವ ದೊಡ್ಡ ಗಾತ್ರದ ಡಿಸ್‍ಪ್ಲೇ ಮೊದಲ ನೋಟಕ್ಕೆ ಗಮನ ಸೆಳೆಯುತ್ತದೆ. ಈ ದೊಡ್ಡ ಡಿಸ್‍ಪ್ಲೇ ಮೂಲಕ ಎಲ್ಲಾ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ. ಕಾರಿನ ಟೈರ್ ಗಾಳಿ ಒತ್ತಡ ಸೇರಿದಂತೆ ಕಾರಿನ ಹೆಚ್ಚಿನ ಮಾಹಿತಿ ಪಡೆಯಲು ಸಾಧ್ಯವಿದೆ.

ದೇಶಕ್ಕೆ ಆಗಮಿಸುವ ಗ್ರಾಂಡ್ ಚೆರೊಕೆ ವಿ6 3.0 ಲೀಟರ್ ಕಾಮನ್ ರೈಲ್ ಡೀಸಲ್ ಎಂಜಿನ್ ಹೊಂದಿರಲಿದೆ. ಇದು 237 ಅಶ್ವಸಾಮಥ್ರ್ಯ ಮತ್ತು 550 ಎನ್‍ಎಂ ಟಾರ್ಕ್ ಪವರ್ ನೀಡುತ್ತದೆ. ಇದು 5 ಸ್ಪೀಡಿನ ಆಟೋಮ್ಯಾಟಿಕ್ ಗಿಯರ್ ಬಾಕ್ಸ್ ಹೊಂದಿದೆ. ಜಾಗತಿಕ ಮಾರುಕಟ್ಟೆಯಲ್ಲಿ 6.8 ಲೀಟರ್‍ನ ವಿ8 ಪೆಟ್ರೋಲ್ ಎಂಜಿನ್‍ನ ಆವೃತ್ತಿ ಸಹ ಮಾರಾಟವಾಗುತ್ತಿದೆ. ಇದು ದೇಶಕ್ಕೆ ಆಗಮಿಸುವ ಕುರಿತು ಖಚಿತವಾಗಿಲ್ಲ. ದೇಶದಲ್ಲಿ ಗ್ರಾಂಡ್ ಚೆರೊಕೆ ದರ 50-60 ಲಕ್ಷದ ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ.
 
ವ್ರಾಂಗ್ಲರ್

ವಿಲ್ಲಿಸ್ ಎಂಬಿ ಎಸ್‍ಯುವಿಯ ವಂಶವಾಹಿ ಸರಣಿಯಲ್ಲಿ ಬಂದ ವ್ರಾಂಗ್ಲರ್ ಸಮರ್ಥ ಎಸ್‍ಯುವಿಯಾಗಿದೆ. ಇದು 2.8 ಲೀಟರ್‍ನ ಡೀಸಲ್ ಎಂಜಿನ್ ಹೊಂದಿದೆ. ವ್ರಾಂಗ್ಲರ್ ಕಾರು ಎರಡು ಬಾಡಿ ವಿನ್ಯಾಸದ ಆಯ್ಕೆಗಳಲ್ಲಿ ಲಭ್ಯ. ಇನ್ನುಳಿದ ಆವೃತ್ತಿಗಳು ಮೃದುವಾದ ಮೇಲ್ಚಾವಣಿ ಮತ್ತು ಗಟ್ಟಿಯಾದ ಮೇಲ್ಚಾವಣಿ ಎಂಬೆರಡು ಆವೃತ್ತಿಗಳಲ್ಲಿ ಲಭ್ಯವಿದೆ. ಗಾಳಿಗೆ ಮೈ ತೆರೆದುಕೊಂಡು ಜೀಪ್ ಓಡಿಸಬೇಕೆಂದರೆ ಮೇಲ್ಚಾವಣಿ ಕಡಿಮೆ ಇರುವ ವ್ರಾಂಗ್ಲರ್ ಆಯ್ಕೆ ಮಾಡಿಕೊಳ್ಳಬಹುದು.

ಹೊರವಿನ್ಯಾಸದಲ್ಲಿ ವ್ರಾಂಗ್ಲರ್ ಸಾಮಾನ್ಯ ಎಸ್‍ಯುವಿಗಳಂತೆ ಗೋಚರಿಸುತ್ತದೆ. ಸುರಕ್ಷಿತ ಆಫ್ ರೋಡ್ ಸವಾರಿಗೆ ಸೂಕ್ತವಾಗುವಂತೆ ಮುಂಭಾಗದಲ್ಲಿ ದೊಡ್ಡ ಗಾತ್ರದ ಬಂಪರ್ ಇದೆ. ವ್ರಾಂಗ್ಲರ್‍ನಲ್ಲಿ ಅತ್ಯಾಧುನಿಕ ಸುರಕ್ಷತೆಯ ತಂತ್ರಜ್ಞಾನಗಳಿದ್ದು, ಕ್ಲಾಸಿಕ್ ಲುಕ್‍ನ ಮಾಡರ್ನ್ ಎಸ್‍ಯುವಿಯಾಗಿದೆ. ದೃಢವಾಗಿ ಪ್ರಯಾಣಿಸಲು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಇದೆ. ಎಬಿಎಸ್, ಏರ್‍ಬ್ಯಾಗ್‍ಗಳು ಸಹ ಇವೆ.  ಸ್ಟಿಯರಿಂಗ್ ವೀಲ್‍ನಲ್ಲೇ ಆಡಿಯೋ ಕಂಟ್ರೋಲ್ಸ್ ಇವೆ. ಬ್ಲೂಟೂಥ್, ಪವರ್ ವಿಂಡೋಸ್, ನ್ಯಾವಿಗೇಷನ್ ಸಿಸ್ಟಮ್, ಟೈರ್ ಪ್ರೆಷರ್ ಮಾನಿಟರ್ ಇತ್ಯಾದಿಗಳು ಪ್ರಮುಖವಾಗಿ ಗಮನ ಸೆಳೆಯುವ ಫೀಚರುಗಳು.

ದೇಶಕ್ಕೆ 2.2 ಲೀಟರ್‍ನ ಇನ್‍ಲೈನ್ ಫೆÇೀರ್ ಡೀಸಲ್ ಎಂಜಿನ್‍ನ ವ್ರಾಂಗ್ಲರ್ ಎಸ್‍ಯುವಿ ಆಗಮಿಸಲಿದೆ. ಇದು 195 ಹಾರ್ಸ್ ಪವರ್ ಮತ್ತು 480ಎನ್‍ಎಂ ಟಾರ್ಕ್ ಪವರ್ ನೀಡಲಿದೆ. ಜಾಗತಿಕ ಮಾರುಕಟ್ಟೆಯಲ್ಲಿ ವ್ರಾಂಗ್ಲರ್ ವಿ6 ಪೆಟ್ರೋಲ್ ಆವೃತ್ತಿಯಲ್ಲೂ ಲಭ್ಯವಿದೆ. ಇದು ಭಾರತಕ್ಕೆ ಆಗಮಿಸುವ ಸೂಚನೆ ದೊರಕಿಲ್ಲ. ಗ್ರಾಂಡ್ ಚೆರೊಕೆಯಂತೆ ವ್ರಾಂಗ್ಲರ್ ಎಸ್‍ಯುವಿಯ ದರ ಮಾಹಿತಿಯನ್ನು ಕಂಪನಿ ನೀಡಿಲ್ಲ. ವ್ರಾಂಗ್ಲರ್ ದರ  30-35 ಲಕ್ಷದ ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ.

No comments