ಬನಾನ ರಿಪಬ್ಲಿಕ್

Share:
ಬಾಳೆಹಣ್ಣು ಕೇಕ್ ಬಗ್ಗೆ ತಿಳಿಯಬೇಕಿತ್ತು. ಗೂಗಲ್ ನಲ್ಲಿ ಬನಾನ ಅನ್ನೋ ಕೀವರ್ಡ್ ಬರೆದೆ. ಮೊದಲು ಕಂಡದ್ದು ಬಾಳೆಹಣ್ಣು ಅಲ್ಲ. ಬದಲಿಗೆ ಬನಾನ ರಿಪಬ್ಲಿಕ್ ಸಿಕ್ತು. ಬಾಳೆಹಣ್ಣು, ಬಾಳೆಹಣ್ಣು ಕೇಕ್ ಇತ್ಯಾದಿಗಳನ್ನೆಲ್ಲ ಹಿಂದಿಕ್ಕಿ ಗೂಗಲ್ ನಲ್ಲಿ ಮುಂದೆ ಬಂದ ಬನಾನ ರಿಪಬ್ಲಿಕ್ ತುಂಬಾ ಇಂಟ್ರೆಸ್ಟಿಂಗ್ ಅನಿಸಿತು.

ಆದರೆ ನಾನೆಲ್ಲೂ ರಾಜ್ಯಶಾಸ್ತ್ರ ಪುಸ್ತಕದಲ್ಲಿ ಬನಾನ ರಿಪಬ್ಲಿಕ್ ಅಂತ ಓದಿದ್ದು ನೆನಪಿಗೆ ಬರಲಿಲ್ಲ. ಬಾಳೆಹಣ್ಣು ಮುಂದಿಟ್ಟು ಮಂಗಗಳು ಮಾಡಿದ ಉಪವಾಸದ ಕತೆ ಮಾತ್ರ ನೆನಪಿತ್ತು.

ಕಳೆದ ವರ್ಷ ಯಾರೋ ಬನಾನಾ, ಮ್ಯಾಂಗೊ ಅಂತ ಹೇಳಿದ್ದು ಚೂರು ನೆನಪಿತ್ತು. ಕಳೆದ ವರ್ಷ ರಾಬರ್ಟ್ ವಾದ್ರಾ(ಪ್ರಿಯಾಂಕ ಗಾಂಧಿಯ ಪತಿ) ಫೇಸ್ಬುಕ್ ನಲ್ಲಿ "ಮ್ಯಾಂಗೊ ಪೀಪಲ್ ಇನ್ ಬನಾನ ರಿಪಬ್ಲಿಕ್" ಎಂದು ಹೇಳಿದ್ದು ಭಾರೀ ಕಾಂಟ್ರವರ್ಸಿಯಾಗಿತ್ತು. 

ನಾನು ಬಾಳೆಹಣ್ಣು ಕೇಕ್ ಮರೆತು, ಬನಾನ ರಿಪಬ್ಲಿಕ್ ಮೇಲೆ ಸರ್ಚ್ ಕೊಟ್ಟೆ. ಇದು ಸಣ್ಣ ಲ್ಯಾಟಿನ್ ಅಮೆರಿಕದ ಕೆರಿಬಿಯನ್ ಗಳಲ್ಲಿ ಅಥವಾ ಆಫ್ರಿಕಾದ ದೇಶಗಳಲ್ಲಿ ಹೆಚ್ಚು ಜನಪ್ರಿಯವಂತೆ. ಅಲ್ಪಸ್ವಲ್ಪ ಕೃಷಿಯನ್ನೇ ನಂಬಿ, ಸಣ್ಣ, ಸ್ವಯಂ ಚುನಾಯಿತರಾದ ಶ್ರೀಮಂತ ಮತ್ತು ಭ್ರಷ್ಟವ್ಯಕ್ತಿಗಳಿಂದ ಆಳ್ವಿಕೆ ಮಾಡಲ್ಪಟ್ಟ ರಾಜಕೀಯವಾಗಿ ಅಸ್ಥಿರತೆ ಹೊಂದಿರುವ ದೇಶವನ್ನು "ಬನಾನ ರಿಪಬ್ಲಿಕ್" ಅನ್ನುತ್ತಾರಂತೆ.

ರಾಜಕೀಯವಾಗಿ ಅಸ್ಥಿರತೆ ಇರುವ ಇಂತಹ ದೇಶಗಳ ಆರ್ಥಿಕತೆ ಹಣ್ಣು, ಕೃಷಿ ಇತ್ಯಾದಿ ಉತ್ಪನ್ನಗಳನ್ನು ರಫ್ತನ್ನು ಅವಲಂಬಿಸಿತ್ತಂತೆ. ಮುಖ್ಯವಾಗಿ ಶ್ರೀಮಂತ ವ್ಯಾಪಾರಿಗಳು ದುಡಿಯುವ ವರ್ಗವನ್ನು ಶೋಷಣೆ ಮಾಡಿ ಬದುಕುವ ವ್ಯವಸ್ಥೆಯಂತೆ.

ಅಮೆರಿಕದ ಬರಹಗಾರ ಒ. ಹೆನ್ರಿ ಸಹ 1904ರಲ್ಲಿ ಬರೆದ ಸಣ್ಣಕಥಾ ಪುಸ್ತಕದಲ್ಲಿ "ಕ್ಯಾಬೆಜ್ ಆ್ಯಂಡ್ ಕಿಂಗ್ಸ್" ಪುಸ್ತಕದಲ್ಲಿ ಬನಾನ ರಿಪಬ್ಲಿಕ್ ದೇಶಗಳ ಬಗ್ಗೆ ಬರೆದಿದ್ದಾನಂತೆ. ಇದೇ ರೀತಿ ಮ್ಯಾಂಗೊ ಪೀಪಲ್,  ಕ್ವಿಡ್ ಪ್ರೊ ಕ್ಯೊ, ಸ್ವೀಟ್ ಹಾರ್ಟ್ ಡೀಲ್ ಹಿಂದೆಯೂ ಆಸಕ್ತಿದಾಯಕ ವಿಚಾರಗಳಿವೆ. ಆಸಕ್ತಿ ಇರುವವರು ನೆಟ್ ನಲ್ಲಿ "Banana Repablic" ಇತ್ಯಾದಿಗಳನ್ನು ಜಾಲಾಡಬಹುದು :-)

No comments