ಒಂದು ವಾಕ್ಯದ ಕತೆ(?)ಗಳು

Share:
 :-) :-(

* ಅವಳಿಗೆ/ಅವನಿಗೆ ಅವನ/ಅವಳ ಫೇಸ್ಬುಕ್ ಪಾಸ್ವರ್ಡ್ ಸಿಕ್ಕಿತ್ತು. ಇಲ್ಲಿಗೆ ಕತೆ ಮುಗಿಯಿತು :-)

* ಹಸಿದ ಹೊಟ್ಟೆಯಲ್ಲಿದ್ದ ಬಡವ ಪಂಚತಾರ ಹೋಟೆಲಿನಲ್ಲಿರುವುದಾಗಿ "ಸ್ಟೇಟಸ್" ಹಾಕಿ ಹೊಟ್ಟೆ ತುಂಬಿಸಿಕೊಂಡ :-(

* ಅರ್ಧ ಗಂಟೆಯಿಂದ ಸ್ನೇಹಿತೆ
ಕಳುಹಿಸಿದ ಖಾಲಿ ಎಸ್ಎಂಎಸ್ ಓದುತ್ತಿದ್ದ.

* ಇಂಟರ್ನೆಟ್ ನಲ್ಲಿ ಎಲ್ಲವೂ ಸಿಗುತ್ತೆ ಎಂದಿದ್ದ ಮಗನ ಮಾತು ನೆನಪಿಗೆ ಬಂದು ಮಗನ ಹುಡುಕಿದಳು

* ಪಕ್ಕದ ಮನೆಯಲ್ಲಿ ಮಗು ಅಳುವುದನ್ನು ಕೇಳಿ ಇವಳು ಅತ್ತಳು.

* ಕೆಲವು ಹಕ್ಕಿಗಳು ಗೂಡು ಕಟ್ಟದೆ, ಮನೆಯ ಮಾಡಿನಲ್ಲಿ ಒಂದೆರಡು ದಿನ ಕುಳಿತು ಹಾರಿ ಹೋಗುತ್ತವೆ.

* ನಾದಿನಿ ತಲೆಸುತ್ತು ಎಂದಾಗ ಬೆಚ್ಚಿದ.

* ಸೀರೆಯಂಗಡಿಯ ಗೊಂಬೆಯಾಗುವ ಬಯಕೆಯಂತೆ ಈ ನೀರೆಗೆ...

* ಅಕ್ಕ ಹೊಟ್ಟೆ ನೋವೆಂದಗ ಅಮ್ಮ ಖುಷಿಪಟ್ಟಳು.

* ಮಗಳು ತನ್ನಷ್ಟಕ್ಕೆ ನಗುವುದನ್ನು ನೋಡಿದ ಅಮ್ಮನಿಗೆ ಏನೋ ನೆನಪಾಯಿತು.

* ಪ್ರೀತಿಯಂದುಕೊಂಡು ಸ್ನೇಹವ ಕಳೆದುಕೊಂಡವನ ಕಣ್ಣೀರನ್ನು ಕಂಡ ಕುಚೇಲನಿಗೆ ಅವಲಕ್ಕಿ ನೆನಪಾಯಿತು.

* ಅವಳು ಆನ್ ಲೈನ್ ಗೆ ಬರೋದನ್ನೇ ಕಾಯುತ್ತಿದ್ದ ಅವನಿಗೆ ಅವಳು ಆಫ್ ಲೈನಲ್ಲಿ ಚಾಟ್ ಮಾಡುತ್ತಿದ್ದ ಸಂಗತಿ ಗೊತ್ತಾಗಲೇ ಇಲ್ಲ.

* ದಯಾಮರಣ ಕಾನೂನು ಸಮ್ಮತವಾಗಿದ್ದರೆ ಇವರನ್ನು ಮುಗಿಸಿಬಿಡಬಹುದಿತ್ತು ಎಂಬ ಗುಸುಗುಸು ಕೇಳಿಸಿಕೊಂಡ ಅಜ್ಜ ಆಸ್ತಿಯನ್ನೆಲ್ಲ ಅನಾಥಶ್ರಮಕ್ಕೆ ಬರೆದುಬಿಟ್ಟ.

* ಹಸಿವು ಎಂದವನ ಕಣ್ಣನ್ನು ಅವಳು ಇನ್ನೊಮ್ಮೆ ನೋಡಿದಳು.

* ಇವರಿಬ್ಬರ ಪ್ರೀತಿಯ ಗಾಢತೆ ನೋಡಿದ ಯಮನ ಕೋಣ ಯುಟರ್ನ್ ತೆಗೆದುಕೊಂಡಿತು.

No comments